ಮಹಾರಾಷ್ಟ್ರ: ಗುಡ್ಡಾಪುರ ದಾನಮ್ಮದೇವಿ. ಈ ದೇವಿ ಆರಾಧಕರು ಎಲ್ಲೆಡೆ ಇದ್ದಾರೆ. ದೂರ ದೂರದ ರಾಜ್ಯಗಳಿಂದಲೂ ಮಹಾರಾಷ್ಟ್ರ ಈ ದೇವಿ ದರುಶನಕ್ಕೆ ಜನ ಬರ್ತಾರೆ. ಬನ್ನಿ ನಾನೃವೂ ಹೋಗೋಣ.
ಗುಡ್ಡಾಪುರದ ದಾನಮ್ಮ. ಈ ದೇವಿ ಆರಾಧನೆ ಮಾಡೋ ಭಕ್ತರ ಸಂಖ್ಯೆ ಅಪಾರವಾಗಿದೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನಲ್ಲಿಯೇ ಈ ದೇವಿಯ ದೇವಸ್ಥಾನ ಇದೆ.
ವಿಜಯಪುರದಿಂದ ಕೇವಲ 60 ಕಿಲೋ ಮೀಟರ ದೂರದಲ್ಲಿ ಗುಡ್ಡಾಪುರ ಇದೆ. ಈ ತಾಯಿಯ ದೇವಸ್ಥಾನದಲ್ಲಿ ಬೃಹತ ಆವರಣ ಇದೆ. ಹಳೆ ಶೈಲಿಯ ಗೋಪುರ, ಆಕರ್ಷಕ ದ್ವಾರ ಬಾಗಿಲು ಇಲ್ಲಿ ನಿಮ್ಮನ್ನ ಸ್ವಾಗತಿಸುತ್ತದೆ.
ಎಲ್ಲ ದೇವಸ್ಥಾನಗಳಂತೇನೆ ಇಲ್ಲೂ ಗರ್ಭಗುಡಿಯಲ್ಲಿ ಫೋಟೋ ತೆಗೆಯೋಕೆ, ಚಿತ್ರೀಕರಣ ಮಾಡೋಕೆ ಚಾನ್ಸ್ ಇಲ್ಲವೇ ಇಲ್ಲ. ಆದರೆ, ಭಕ್ತರು ಉಳಿದುಕೊಳ್ಳಲು ಸೂಕ್ತ ರೂಮ್ ಗಳ ವ್ಯವಸ್ಥೆಯನ್ನ ಇಲ್ಲಿ ದೇವಸ್ಥಾನದ ಟ್ರಸ್ಟ್ ಕಮಿಟಿ ಕಲ್ಪಿಸಿದೆ. ಭಕ್ತರ ಆರ್ಥಿಕ ಸ್ಥಿತಿಗತಿ ಮೇಲೆ ಇಲ್ಲಿ ರೂಮ್ ಗಳು ದೊರೆಯುತ್ತವೆ.
ಕರ್ನಾಟಕಕ್ಕೆ ತುಂಬಾ ಹತ್ತಿರದಲ್ಲಿಯೇ ಇರೋದ್ರಿಂದ ಮರಾಠಿ ಮಿಶ್ರಿತ ಕನ್ನಡ ಮಾತನಾಡೋ ಜನ ನಿಮಗೆ ಇಲ್ಲಿ ಸಿಗುತ್ತಾರೆ. ಅಪ್ಪಟ ಕನ್ನಡ ಮಾತನಾಡೋ ಜನರಿಗೆ ಇಲ್ಲಿ ಕೊರತೆ ಇಲ್ಲ ಬಿಡಿ. ದೇವಿ ಭಕ್ತರು ಇಲ್ಲೊಮ್ಮೆ ಭೇಟಿ ಕೊಡಬಹು.
PublicNext
11/05/2022 10:57 am