ದಾವಣಗೆರೆ: ನಾಡಿನೆಲ್ಲೆಡೆ ಬಸವ ಜಯಂತಿಯನ್ನು ಆಚರಿಸಲಾಗುತ್ತಿದೆ. ಆದ್ರೆ ನ್ಯಾಮತಿ ತಾಲೂಕಿನ ಮಲ್ಲಿಗೇನಹಳ್ಳಿ ಗ್ರಾಮಸ್ಥರು ಬಸವಜಯಂತಿಯನ್ನು ವಿಶೇಷವಾಗಿ ಆಚರಣೆ ಮಾಡಿದರು.
ನ್ಯಾಮತಿ ತಾಲೂಕಿನ ಮಲ್ಲಿಗೇನಹಳ್ಳಿ ಗ್ರಾಮದಲ್ಲಿ ಹಬ್ಬದ ಹಿನ್ನೆಲೆ ಎತ್ತುಗಳನ್ನು ವಿಶೇಷವಾಗಿ ಗ್ರಾಮಸ್ಥರು ಅಲಂಕರಿಸಿದ್ದರು. ಬಸವಣ್ಣನವರ ಭಾವಚಿತ್ರವನ್ನು ಎತ್ತಿನಗಾಡಿಯಲ್ಲಿಟ್ಟು ಮೆರವಣಿಗೆ ಮಾಡುವ ಮೂಲಕ ಗ್ರಾಮಸ್ಥರು ಗಮನ ಸೆಳೆದರು. ಬಸವಣ್ಣನವರ ಭಾವಚಿತ್ರವಿರುವ ಎತ್ತಿನ ಗಾಡಿಯನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಚಲಾಯಿಸಿದರು.
ಮೆರವಣಿಗೆಯಲ್ಲಿ ತಮಟೆ ಬಾರಿಸಿ ಎತ್ತುಗಳೊಂದಿಗೆ ಸಖತ್ ಫೋಸ್ ನೀಡುವ ಮೂಲಕ ರೇಣುಕಾಚಾರ್ಯ ಗಮನ ಸೆಳೆದರು. ಇನ್ನು ಬನ್ಯಾಮತಿ ತಾಲೂಕು ಆಡಳಿತ ಹಾಗೂ ಸಮಾಜದ ಬಂಧುಗಳಿಂದ ಬಸವ ಜಯಂತಿ ಆಯೋಜನೆಮಾಡಲಾಗಿತ್ತು. ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಭಾವಚಿತ್ರ ಹೊತ್ತ ಟ್ರ್ಯಾಕ್ಟರ್ ಅನ್ನು ಹೊನ್ನಾಳಿ - ನ್ಯಾಮತಿ ಶಾಸಕ ರೇಣುಕಾಚಾರ್ಯ ಚಲಾಯಿಸಿದರು. ಬಸವಜಯಂತಿ ಹಿನ್ನೆಲೆಯಲ್ಲಿ ಎತ್ತುಗಳಿಗೆ ವಿಶೇಷ ಅಲಂಕಾರ ಮಾಡಿ ಯುವಕರು ಖುಷಿಪಟ್ಟರು.
PublicNext
03/05/2022 03:15 pm