ಬಸವಕಲ್ಯಾಣ : ಮನುಷ್ಯ ಯಂತ್ರದಂತೆ ದುಡಿಯುತ್ತಿದ್ದರೂ ಜೀವನದಲ್ಲಿ ಇರಬೇಕಾದಷ್ಟು ಶಾಂತಿ ನೆಮ್ಮದಿಯಿಲ್ಲ. ವ್ಯಕ್ತಿತ್ವ ವಿಕಾಸಕ್ಕೆ ಸಂಸ್ಕಾರ ಸಂಸ್ಕøತಿಗಳ ಅವಶ್ಯಕತೆಯಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಉಜ್ವಲ ಬದುಕಿಗೆ ಕೊಟ್ಟ ಕೊಡುಗೆ ಅಪಾರವಾದುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ತ್ರಿಪುರಾಂತಕ ಶ್ರೀ ಘನಲಿಂಗ ರುದ್ರಮುನಿ ಗವಿಮಠದಲ್ಲಿ ಜರುಗಿದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಜ್ಞಾನ ವಿಜ್ಞಾನಗಳು ಬೆಳೆಯುತ್ತಿದ್ದರೂ ಜನ ಸಮುದಾಯದಲ್ಲಿ ವಿಶ್ವಾಸ ನಂಬಿಕೆ ವಾತ್ಸಲ್ಯದ ಕೊರತೆ ಕಾಣುತ್ತೇವೆ. ಶಿವಾದ್ವೈತ ಜ್ಞಾನ ಸಂಪಾದನೆಯಿಂದ ಬದುಕು ಶ್ರೀಮಂತಗೊಳ್ಳುತ್ತದೆ. ಶ್ರದ್ಧೆ, ಉದ್ಯೋಗಶೀಲತೆ, ನಿರ್ಭಯತೆ, ಸಾತ್ವಿಕತೆ, ಅಹಿಂಸೆ, ದಯೆ, ಕ್ಷಮಾ ಸದ್ಗುಣಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಬಾಳಬೇಕೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ. ಅಭಿನವ ಘನಲಿಂಗ ರುದ್ರಮುನಿ ಶ್ರೀಗಳ ಪರಿಶ್ರಮ ಸಾಧನೆಯಿಂದ ತ್ರಿಪುರಾಂತಕ ಗವಿಮಠ ಅಭಿವೃದ್ಧಿಗೊಳ್ಳುತ್ತಿರುವುದು ತಮಗೆ ಹರುಷ ತಂದಿದೆ ಎಂದರು.
ಸಾನ್ನಿಧ್ಯ ವಹಿಸಿದ ಶ್ರೀ ಹಿಮವತ್ಕೇದಾರ ಭೀಮಾಶಂಕರ ಜಗದ್ಗುರುಗಳು ತಮ್ಮ ಆಶೀರ್ವಚನ ನೀಡಿದರು. ರೇವಣಸಿದ್ಧ ದೊರೆಗಳು ಪುಸ್ತಕ ಪರಿಚಯ ಮಾಡಿದರು.
ಶಾಸಕ ಈಶ್ವರ ಖಂಡ್ರೆ, ನಗರಸಭೆ ಅಧ್ಯಕ್ಷೆ ಶಾಹಾಜಾನ ತನ್ವೀರ್, ಶ್ರೀ ಜ.ಘ.ರು.ಶಿ.ಗವಿಮಠದ ಕಾರ್ಯಾಧ್ಯಕ್ಷ ಶರಣಪ್ಪಾ ಬಿರಾದಾರ, ಬಿ.ಡಿ.ಎ.ಅಧ್ಯಕ್ಷ ರಾಜಕುಮಾರ ಪಾಟೀಲ ಸಿರಗಾಪುರ, ಜಿ.ಪಂ.ಮಾಜಿ ಅಧ್ಯಕ್ಷರಾದ ನಿರ್ಮಲಾ ಮಾನೆಗೋಪಾಳೆ, ಲತಾ ಹಾರಕೂಡೆ, ತಾ.ಕಾಂಗ್ರೆಸ್ ಅಧ್ಯಕ್ಷ ನೀಲಕಂಠ ರಾಠೋಡ, ಜಿ.ಪಂ.ಮಾಜಿ ಸದಸ್ಯ ಸುಧೀರ ಕಾಡಾದೆ, ಆಮ್ ಆದ್ಮಿ ಪಕ್ಷದ ದೀಪಕ ಮಾಲಗಾರ, ಮಂಜೂರ ಅಹ್ಮದ ನಿಲಂಗೆ, ಶಿವರಾಜ ನರಶೆಟ್ಟಿ, ಸಿದ್ರಾಮ ಗುದುಗೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ನೇತೃತ್ವ ವಹಿಸಿದ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರೇನಾಗಾಂವ ಜಯಶಾಂತಲಿಂಗ ಸ್ವಾಮಿಗಳು ಸಮ್ಮುಖ ವಹಿಸಿದ್ದರು. ಮುತ್ಯಾನ ಬಬಲಾದ ಗುರುಪಾದಲಿಂಗ ಸ್ವಾಮಿಗಳು, ರಾಜೇಶ್ವರ ಘನಲಿಂಗ ರುದ್ರಮುನಿ ಶಿವಾಚಾರ್ಯರು ಉಪಸ್ಥಿತರಿದ್ದರು. ದೂರದರ್ಶನ ಕಲಾವಿದ ನವಲಿಂಗ ಪಾಟೀಲ ನಿರೂಪಿಸಿದರು.
ಸಮಾರಂಭಕ್ಕೂ ಮುನ್ನ ಉಭಯ ಜಗದ್ಗುರುಗಳವರನ್ನು ಪೂರ್ಣಕುಂಭ ಮೆರವಣಿಗೆಯೊಂದಿಗೆ ಬರ ಮಾಡಿಕೊಂಡರು. ಆಗಮಿಸಿದ ಸಕಲ ಸದ್ಭಕ್ತರಿಗೆ ಅನ್ನ ದಾಸೋಹ ಜರುಗಿತು.
ಸಿ.ಎಚ್. ಬಾಳನಗೌಡ್ರ
ವಾರ್ತಾ ಸಂಯೋಜನಾಧಿಕಾರಿ,
ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ,
PublicNext
24/04/2022 08:55 am