ಹಿಜಾಬ್ , ಹಲಾಲ್ ,ಜಟ್ಕಾ ಕಟ್, ಜಾತ್ರೆಗಳಲ್ಲಿ ಮುಸ್ಲಿಂ ವರ್ತಕರಿಗೆ ವ್ಯಾಪಾರ ನಿಷೇಧದ ಬಳಿಕ ಇದೀಗ ಮತ್ತೊಂದು ಅಭಿಯಾನ ಶುರುವಾಗಿದೆ. ಹೌದು ಮುಸ್ಲಿಂ ಸಮುದಾಯದವರು ಕೆತ್ತಿದ ಮೂರ್ತಿಗಳು ಪೂಜೆಗೆ ಯೋಗ್ಯವಲ್ಲ. ಆ ಮೂರ್ತಿಗಳನ್ನು ನಿಷೇಧಿಸಬೇಕು ಎಂಬ ಅಭಿಯಾನ ಆರಂಭವಾಗಿದೆ.
ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದ ಸ್ಥಾನಿಕ ಶ್ರೀನಿವಾಸನ್ ನೇತೃತ್ವದಲ್ಲಿ ಈ ಅಭಿಯಾನ ಶುರುವಾಗಿದ್ದು, ಮುಸ್ಲಿಮರು ದೇವರ ವಿಗ್ರಹಗಳನ್ನು ಕೆತ್ತನೆ ಮಾಡುವುದು ಸರಿಯಲ್ಲ. ಅದನ್ನು ಶಾಸ್ತ್ರವು ಕೂಡ ಒಪ್ಪಲ್ಲ.ಶಾಸ್ತ್ರದ ಪ್ರಕಾರ ವಿಶ್ವಕರ್ಮ ಜನಾಂಗದವರು ಮೂರ್ತಿ ಕೆತ್ತಬೇಕು. ಹೀಗಾಗಿ ಮುಸ್ಲಿಮರು ಕೆತ್ತನೆ ಮಾಡಿದ ವಿಗ್ರಹ ಪ್ರತಿಷ್ಠಾಪಿಸಬಾರದು ಎಂದಿದ್ದಾರೆ.
ಒಟ್ಟಾರೆಯಲ್ಲಿ ರಾಜ್ಯದ ದೇವಾಲಯಗಳಿಗೆ ಭೇಟಿ ನೀಡಿ ಅಭಿಯಾನ ಮಾಡುತ್ತೇನೆ ಎಂದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇಗುಲದ ಸ್ಥಾನಿಕ ಶ್ರೀನಿವಾಸನ್ ತಿಳಿಸಿದ್ದಾರೆ. ಚೆಲುವನಾರಾಯಣಸ್ವಾಮಿಗೆ ದೀವಟಿಗೆ ಸಲಾಂ ಎಂಬ ಹೆಸರಿನಲ್ಲಿ ದೇಗುಲದಲ್ಲಿ ಆರತಿ ನಡೆಯುತ್ತಿದೆ. ‘ಸಲಾಂ’ ಪದ ಬದಲಾಗಿ ಸಂಧ್ಯಾರತಿ ಎಂದು ಹೆಸರಿಡಲು ಸ್ಥಾನಿಕರು ಅಭಿಪ್ರಾಯ ಪಟ್ಟಿದ್ದಾರೆ.
PublicNext
07/04/2022 03:57 pm