ನವದೆಹಲಿ: ಅತ್ಯುತ್ತಮ ಮುಸ್ಲಿಂ ಎಂದು ತೋರಿಸಲು ಹಿಜಾಬ್ ಧರಿಸಲೇಬೇಕಿಲ್ಲ. ಹೀಗಂತ ಹೇಳಿರೋದು ಯಾರು ಗೊತ್ತೇ ? 12 ನೇ ತರಗತಿ ಓದುತ್ತಿರೋ ಹುಡುಗಿ. ಅದು ಕಾಶ್ಮೀರಿ ಹುಡುಗಿ.
ಈ ಹುಡುಗಿ ಹೆಸರು ಅರೋಸಾ ಫರ್ವೇಜ್. ಕಾಶ್ಮೀರ ನಿವಾಸಿ. ಪಿಯುಸಿಯಲ್ಲಿ ಟಾಪರ್.ಮೊನ್ನೆ ನಡೆದ ಪಿಯುಸಿ ಪರೀಕ್ಷೆಯಲ್ಲಿ ಈ ಹುಡುಗಿ 500 ಅಂಕ ಗಳಲ್ಲಿ 499 ಅಂಕ ಪಡೆದಿದ್ದಾಳೆ.
ಇಂತಹ ಜಾಣ ಹುಡುಗಿ ಕೂಡ ಈಗ ಹಿಜಾಬ್ ಬಗ್ಗೆ ಮಾತನಾಡಿದ್ದಾಳೆ. ನಾನು ಉತ್ತಮ ಮುಸ್ಲಿಂ ಅಂತ ತೋರಿಸಲು ಧರಿಸಲೇಬೇಕಿಲ್ಲ ಎಂದೇ ಹೇಳಿ ಎಲ್ಲರ ಗಮನ ಸೆಳೆದಿದ್ದಾಳೆ.
PublicNext
14/02/2022 07:52 am