ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕ್ರಿಸ್ ಮಸ್ ಹಬ್ಬವನ್ನ ಅದ್ದೂರಿಯಾಗಿಯೇ ಆಚರಿಸಲಾಗಿದೆ. ಕೋವಿಡ್ ಆತಂಕದ ಮಧ್ಯೇನೆ ಜನ ಸಾಮೂಹಿಕ ಪ್ರಾರ್ಥನೆ ಮಾಡಿದ್ದಾರೆ.
ಸೇಂಟ್ ಫಿಲೋಮಿನಾ ಚರ್ಚ್‌ನಲ್ಲಿ ಸಾಮೂಹಿಕ ಪ್ರಾರ್ಥನೆಗೆ ಬಿಷಪ್ ಕೆ. ಎ. ವಿಲಿಯಂ ಚಾಲನೆ ನೀಡಿದರು.ಏಸು ಗೀತೆ ಹಾಡುವ ಮೂಲಕ ಕ್ರೈಸ್ತ ಬಾಂಧವರು ಹಬ್ಬದ ಮೆರುಗು ಹೆಚ್ಚಿಸಿದರು.ಈ ಚರ್ಚ್‌ನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.ಮೈಸೂರು ಧರ್ಮಾಧ್ಯಕ್ಷ ಡಾ. ಕೆ. ಎ. ವಿಲಿಯಂ ಸಮ್ಮುಖದಲ್ಲಿ ವಿಶೇಷ ಪ್ರಾರ್ಥನೆಯುನ್ನ ಕ್ರೈಸ್ತ ಬಾಂದವರು ಸಲ್ಲಿಸಿದರು.
PublicNext
25/12/2021 10:52 am