ಕೋಟ: ರಾಜ್ಯದಲ್ಲಿ ಮತಾಂತರ ನಿಷೇಧ ಬಗ್ಗೆ ಚರ್ಚೆಗಳಾಗುತ್ತಿವೆ. ಮತಾಂತರ ನಿಷೇಧ ಕಾಯಿದೆ ಜಾರಿಗೆ ತರುವುದು ಅತ್ಯಗತ್ಯ. ದೇಶದ ವಿವಿಧ ರಾಜ್ಯಗಳಲ್ಲಿ ಮತಾಂತರ ವ್ಯಾಪಕವಾಗಿ ಹರಡಿದೆ. ನಾನಾ ಆಸೆ- ಆಮಿಷ ಒಡ್ಡಿ , ಹಿಂದೂ ದೇವರನ್ನು ಅಪಹಾಸ್ಯ ಮಾಡಿ, ಮತಾಂತರ ಮಾಡುವುದರ ವಿರುದ್ಧ ಮಠಮಂದಿರಗಳು ಸಿಡಿದೆದ್ದು ನಿಲ್ಲಲಿವೆ ಎಂದು ಸಿದ್ಧಗಿರಿ ಮಹಾಸಂಸ್ಥಾನ ಶ್ರೀ ಕಾಡು ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ಅವರು ಬಾಳೆಕುದ್ರು ಮಠಕ್ಕೆ ಭೇಟಿ ನೀಡಿದ ಸಂದರ್ಭ ಮಾತನಾಡಿದರು. ಮತಾಂತರ ಆಗಿಯೂ ಸರಕಾರದ ಸವಲತ್ತು ಪಡೆಯುವುದು ಸರಿಯಲ್ಲ. ಒತ್ತಾಯಪೂರ್ವಕ ಮತಾಂತರ ಒಳ್ಳೆಯ ಬೆಳವಣಿಗೆಯಲ್ಲ. ಇದು ಹೀಗೆಯೇ ಮುಂದುವರೆದರೆ ಹಿಂದೂ ಸಮಾಜಕ್ಕೆ ಸಂಕಷ್ಟ ಎದುರಾಗುವುದರಲ್ಲಿ ಯಾವುದೇ ಅನುಮಾನವೂ ಇಲ್ಲ. ಈ ವಿಚಾರದಲ್ಲಿ ರಾಜಕೀಯ ಸಲ್ಲದು. ಕಾಯಿದೆ ಜಾರಿಗೊಳ್ಳುವುದಕ್ಕೆ ಎಲ್ಲರೂ ಅನುಕೂಲ ಮಾಡಿಕೊಡಬೇಕು ಎಂದರು.
ಈ ಸಂದರ್ಭ ಬಾಳೆಕುದ್ರು ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿಯವರನ್ನು ಭೇಟಿ ಮಾಡಿ ಮಠದಲ್ಲಿ ನಡೆಯುವ ವಿವಿಧ ಧಾರ್ಮಿಕ, ಸಾಂಸ್ಕ್ರತಿಕ ಕಾರ್ಯಕ್ರಮಗಳ ಕುರಿತು ಚರ್ಚಿಸಿದರು.
PublicNext
15/12/2021 12:55 pm