ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ರಾಮಲೀಲಾ' ಬಣ್ಣ ಹಚ್ಚಿದ ಮುಸ್ಲಿಂ ಕಲಾವಿದರು: ಭಾವೈಕ್ಯತೆ ಅಂದ್ರೆ ಇದೇ ಅಲ್ಲವೇ?

ಲಕ್ನೋ: ಪ್ರಯಾಗ್‌ರಾಜ್‌ನಲ್ಲಿ ಪತ್ತೆರ್ ಚಟ್ಟಿ ರಾಮಲೀಲಾ ಸಮಿತಿಯು ಆಯೋಜಿಸಿದ್ದ 'ರಾಮಲೀಲಾ'ದಲ್ಲಿ ಮುಸ್ಲಿಂ ಕಲಾವಿದರು ಅಭಿನಯಿಸುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಘಟಕರೊಬ್ಬರು, "ಇಬ್ಬರು ಮಹಿಳೆಯರು, ಓರ್ವ ಪುರುಷ ಕಲಾವಿದರು ಮತ್ತು ಮೇಕಪ್ ಮಾಡವ ತಂಡದಲ್ಲಿ ಕೆಲವರು ಮುಸ್ಲಿಮರಿದ್ದಾರೆ. ಈ ರಾಮಲೀಲಾದಲ್ಲಿ ಅವರು ಭಾಗವಹಿಸಿದ್ದು 'ಗಂಗಾ-ಜಮುನಿ ತೆಹ್ಜೀಬ್' ನ ಅತ್ಯುತ್ತಮ ಉದಾಹರಣೆಯಾಗಿದೆ" ಎಂದು ಹೇಳಿದ್ದಾರೆ.

"ನಾನು ಈ ರಾಮಲೀಲಾದಲ್ಲಿ ತ್ರಿಜಟೆ ಮತ್ತು ಅನಸೂಯ ಪಾತ್ರಗಳನ್ನು ನಿರ್ವಹಿಸಿದ್ದೇನೆ. ರಾಮಲೀಲಾದಲ್ಲಿ ಎಲ್ಲಾ ಧರ್ಮದ ಜನರ ಕೊಡುಗೆ ಅಪಾರವಾಗಿದೆ. ನನಗೂ ಇಂತಹ ಅವಕಾಶ ಸಿಕ್ಕಿದ್ದು ಖುಷಿ ತಂದಿದೆ" ಎಂದು ಕಲಾವಿದೆ ಹುಮಾ ಕಮಲ್ ಸಂತಸ ವ್ಯಕ್ತಪಡಿಸಿದ್ದಾರೆ.

Edited By : Vijay Kumar
PublicNext

PublicNext

10/10/2021 02:46 pm

Cinque Terre

51.62 K

Cinque Terre

3