ಚಿತ್ರದುರ್ಗ: ಒಂದೇ ಸಮುದಾಯದ ಎರಡು ಗುಂಪುಗಳ ನಡುವೆ ದೇವಸ್ಥಾನದ ಪೂಜೆ ವಿಚಾರದಲ್ಲಿ ಗಲಾಟೆ ನಡೆದಿದ್ದು, ಎರಡು ಗುಂಪಿನವರು ಕೋರ್ಟ್ ಮೆಟ್ಟಿಲೇರಿದ್ದ ಪ್ರಕರಣ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಟಿ. ಗೊಲ್ಲಹಳ್ಳಿ ಗ್ರಾಮದ ನಡೆದಿತ್ತು. ಈ ಎರಡು ಗುಂಪಿನವರ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಪೂಜಾ ಕಾರ್ಯಕ್ರಮ ನಡೆಯಲು ಅನುಮತಿ ನೀಡಿದ್ದು, ಅಂದು ಬಾಗಿಲು ಹಾಕಿದ ದೇವರ ಗುಡಿ, ಸುಮಾರು 6 ತಿಂಗಳ ನಂತರ ದೇವಸ್ಥಾನದ ಪೂಜಾರಿಕೆಯ ಕೈವಾಡಸ್ಥರು, ಗ್ರಾಮಸ್ಥರ ಸಂಧಾನದೊಂದಿಗೆ, ತಾಲೂಕು ಆಡಳಿತ ಹಾಗೂ ಪೋಲಿಸ್ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಇಂದು ದೇವಸ್ಥಾನದ ಬಾಗಿಲು ತೆರೆಯಲಾಗಿದೆ.
ಈ ದೇವಸ್ಥಾನ ವಿಚಾರವಾಗಿ ಪ್ರಕರಣ ನ್ಯಾಯಾಲಯದಲ್ಲಿ ಇದೆ. ದೇವಿಗೆ ಪೂಜೆ, ಪುನಸ್ಕಾರ ಮಾಡಲು ಅನುಮತಿ ನೀಡಲಾಗಿದೆ. ರಂಗಪ್ಪ ಅವರನ್ನು ಅರ್ಚಕನಾಗಿ ನೇಮಿಸಲಾಗಿದೆ. ದೇವಸ್ಥಾನದ ಯಜಮಾನ ಸಣ್ಣ ರಂಗಪ್ಪ ಎಂಬುವರಿಗೆ ದೇವಸ್ಥಾನ ಉಸ್ತುವಾರಿ ನೋಡಿಕೊಳ್ಳಲು ಕೊಡಲಾಗಿದೆ. ನ್ಯಾಯಾಲಯದ ಆದೇಶ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ತಿಳಿಸಿದರು. ಈ ಸಂದರ್ಭದಲ್ಲಿತಹಶೀಲ್ದಾರ್ ಶಿವಕುಮಾರ್, ವೃತ ನಿರೀಕ್ಷಕ ರಾಘವೇಂದ್ರ, ಪಿಎಸ್ಐ ಪರುಶುರಾಮ ಎನ್ ಲಮಾಣಿ, ಪೂಜಾರಿಗಳು, ಗ್ರಾಮಸ್ಥರು ಹಾಗೂ ಭಕ್ತಾದಿಗಳ ಭಾಗವಹಿಸಿದ್ದರು.
ಘಟನೆ ವಿವರ : ದೇವರಿಗೆ ಪೂಜೆ ಮಾಡುವ ವಿಚಾರದಲ್ಲಿ ಎರಡು ಎರಡು ಗುಂಪುಗಳ ನಡುವೆ ಗೊಲ್ಲಳಮ್ಮನ ಜಾತ್ರೆ ಸಂದರ್ಭದಲ್ಲಿ ಮಾರ್ಚ್ 7 ರಂದು ದೊಡ್ಡ ಗಲಾಟೆ ನಡೆದಿತ್ತು. ಈ ಗಲಾಟೆ ಪ್ರಕರಣ ಅಬ್ಬಿನಹೊಳೆ ಪೋಲಿಸ್ ಮೆಟ್ಟಿಲೇರಿತ್ತು. ಮಾರ್ಚ್ 7 ರಂದು ದೇವಸ್ಥಾನ ಬಾಗಿಲು ಹಾಕಲಾಗಿತ್ತು. ಎರಡು ಗುಂಪುಗಳ ವಿರುದ್ಧ ಪ್ರಕರಣ ದಾಖಲಾಗಿ, ಜೈಲು ಸೇರಿದ್ದರು.
PublicNext
20/09/2021 03:48 pm