ಹನೂರು (ಚಾಮರಾಜನಗರ ಜಿಲ್ಲೆ): ಕೊರೊನಾ ನಿರ್ಬಂಧದ ನಡುವೆಯೂ ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ದೇವಸ್ಥಾನದಲ್ಲಿ ಕುಂಭಾಭಿಷೇಕ ನೆರವೇರಿಸಲಾಗಿದೆ.
ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ ದೇವಾಲಯದಲ್ಲಿ ದೇವರಿಗೆ ಪ್ರತಿ ವರ್ಷ ಶ್ರಾವಣ ಮಾಸದ ಪ್ರತಿಪತ್ ಮತ್ತು ಶ್ರಾವಣ ಮಾಸದ ಕೃಷ್ಣ ಪಕ್ಷದ ಕೊನೆಯ ದಿನದಂದು ಸಂಪ್ರದಾಯದಂತೆ ಜರುಗುವ ಎರಡು ಕುಂಭಾಭಿಷೇಕವು ಧಾರ್ಮಿಕ ವಿಧಿವಿಧಾನಗಳೊಂದಿಗೆ ಸರಳವಾಗಿ ನಡೆಯಿತು.
ತಾಲೂಕಿನ ಶ್ರೀ ಸಾಲೂರು ಬೃಹನ್ಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ 108 ಬೇಡಗಂಪಣ ಅರ್ಚಕರು ಸಾಮೂಹಿಕವಾಗಿ ಸಕಲ ವಾದ್ಯ ಮೇಳಗಳು, ಉತ್ಸವ ವಾಹನಗಳು, ಛತ್ರಿ ಚಾಮರ ಸತ್ತಿಗೆಗಳ ಸಮೇತ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಿದವು. ಪ್ರಾಧಿಕಾರದ ಆಗಮಿಕರು ಮತ್ತು ಸಾಲೂರು ಮಠದ ಗುರುಕುಲದ ವಿದ್ಯಾರ್ಥಿಗಳು ಮತ್ತು ಆಚಾರ್ಯರು ವೀರಶೈವ ಆಗಮೋಕ್ತ ಶಾಸ್ತ್ರ ಸಂಪ್ರದಾಯಗಳಂತೆ ಪೂಜಾ ಕೈಂಕರ್ಯ ನೆರವೇರಿಸಿದರು.
PublicNext
10/08/2021 05:24 pm