ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗವಿಗಂಗಾಧರನಿಗೆ ಸೂರ್ಯ ರಶ್ಮಿ ತಾಕಲಿಲ್ಲ: 53ವರ್ಷಗಳ ನಂತರ ಇದೇ ಮೊದಲು

ಬೆಂಗಳೂರು: ಮಕರ ಸಂಕ್ರಾಂತಿ ಪ್ರಯುಕ್ತ ಬೆಂಗಳೂರಿನ ಗವಿಪುರಂನಲ್ಲಿರುವ ಇತಿಹಾಸ ಪ್ರಸಿದ್ಧ ಗವಿಗಂಗಾಧರ ಸ್ವಾಮಿ ದೇವಸ್ಥಾನದಲ್ಲಿ ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶವಾಗುವುದು ವಾಡಿಕೆ. ಆದರೆ ಈ ಬಾರಿ ಮೋಡ ಅಡ್ಡಬಂದದ್ದರಿಂದ ಲಿಂಗಕ್ಕೆ ಸೂರ್ಯಕಿರಣ ಸ್ಪರ್ಶವಾಗಿಲ್ಲ.

ನಿಗದಿತ ಕಾಲಮಾನದಂತೆ 5.25ರಿಂದ 5.27ರವರೆಗೆ ಶಿವಲಿಂಗದ ಮೇಲೆ ಸೂರ್ಯರಶ್ಮಿ ಸ್ಪರ್ಶವಾಗಬೇಕಿತ್ತು.ಆದರೆ ನಂದಿಯ ಕೊಂಬಿನ ನಡುವೆ ಪ್ರವೇಶಿಸಿದ್ದ ಸೂರ್ಯ ಕಿರಣಕ್ಕೆ ಮೋಡ ಅಡ್ಡ ಬಂದಿದೆ. ಪರಿಣಾಮ ಲಿಂಗದ ಮೇಲೆ ಸೂರ್ಯ ಕಿರಣ ಬೀಳಲಿಲ್ಲ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ "ದೈವ ನಿರ್ಣಯ ದೇವರಿಗಷ್ಟೇ ತಿಳಿದಿರುತ್ತದೆ. ನನ್ನ 53 ವರ್ಷದ ಅನುಭವದಲ್ಲಿ ಹೀಗಾಗ್ದದ್ದು ಇದೇ ಮೊದಲು.೨೦ ನಿಮಿಷಕ್ಕೆ ಮುನ್ನ ಸೂರ್ಯ ದಕ್ಷಿಣಾಯನದಲ್ಲಿದ್ದ, ಈಗ ಉತ್ತರಾಯಣ ಪ್ರವೇಶಿಸಿದ್ದಾನೆ. ಇದರರ್ಥ ಗಂಗಾಧರೇಶ್ವರನನ್ನು ಸೂರ್ಯ ಅಗೋಚರನಾಗಿ ತಾಕಿ ತೆರಳಿದ್ದಾನೆ. ಮೋಡ ಅಡ್ಡ ಬಂದಿದ್ದರಿಂದ ಸೂರ್ಯ ರಶ್ಮಿ ಶಿವಲಿಂಗಕ್ಕೆ ಕಿರಣ ತಾಕಲಿಲ್ಲ ಎಂದಿದ್ದಾರೆ.

Edited By : Nagaraj Tulugeri
PublicNext

PublicNext

15/01/2021 08:07 am

Cinque Terre

64.98 K

Cinque Terre

1

ಸಂಬಂಧಿತ ಸುದ್ದಿ