ನವದೆಹಲಿ: ಅಯೋಧ್ಯೆಯ ರಾಮ ದೇವಾಲಯಕ್ಕೆ ಹಣ ಸಂಗ್ರಹಿಸುವ ಅಭಿಯಾನದ ಸಂದರ್ಭದಲ್ಲೇ ಹಿಂದೂ ಕುಟುಂಬಗಳನ್ನು ಮಾತ್ರ ಸಂಪರ್ಕಿಸುತ್ತೇವೆ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಹೇಳಿದೆ.
ಆದಾಗ್ಯೂ ಇತರ ಧರ್ಮಗಳ ಅನುಯಾಯಿಗಳು ಸ್ವಯಂ ಪ್ರೇರಣೆಯಿಂದ ನೀಡುವ ದೇಣಿಗೆಯನ್ನು ಸ್ವೀಕರಿಸಲಾಗುತ್ತದೆ. 'ಶ್ರೀ ರಾಮ ಜನ್ಮಭೂಮಿ ಮಂದಿರ ನಿಧಿ ಸಮರ್ಪನ್ ಅಭಿಯಾನ್' ಜನವರಿ 15ರಿಂದ ಪ್ರಾರಂಭವಾಗಲಿದ್ದು, ಫೆಬ್ರವರಿ 27ರವರೆಗೆ ರಾಷ್ಟ್ರೀಯ ಮಟ್ಟದಲ್ಲಿ ನಡೆಯಲಿದೆ ಎಂದು ವಿಎಚ್‌ಪಿ ತಿಳಿಸಿದೆ.
PublicNext
02/01/2021 02:06 pm