ಕನಕಪುರ : ಕಾರಣಾಂತಗಳಿಂದ ಕಾಲೇಜಿಗೆ ಹೋಗಬೇಡ ಎಂದಿದ್ದಕ್ಕೆ ಮನನೊಂದು ಯುವತಿ ಕಳೆ ನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಳ್ಳಿಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕನಕಪುರ ತಾಲೂಕಿನ ಹಾರೋಹಳ್ಳಿಯ ಕೊಳ್ಳಿಗಾನಹಳ್ಳಿ ಗ್ರಾಮದ ಚಂದನ(21) ಎಂಬ ಯುವತಿ ಬಿಡದಿಯ ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಅವರ ಅಣ್ಣ ಸೆ.೬ ರಂದು ಕಾರಣಾಂತರಗಳಿಂದ ಕಾಲೇಜಿಗೆ ಹೋಗುವುದು ಬೇಡ ಎಂದಿದ್ದಾರೆ. ಇದಕ್ಕೆ ಬೇಸರ ಮಾಡಿಕೊಂಡ ಚಂದನ ಆಕೆಯ ದೊಡ್ಡಪ್ಪನ ಮನೆಯಲ್ಲಿದ್ದ ಕಳೆನಾಶಕ ಔಷಯನ್ನು ಸೇವಿಸಿದ್ದಾರೆ.
ತಕ್ಷಣ ಅವರನ್ನು ದೊಂಬರದೊಡ್ಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಯೊಂದಕ್ಕೆ ರವಾನಿಸುತ್ತಾರೆ. ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡ ಚಂದನ ಮನೆಗೆ ಹಿಂದಿರುಗುತ್ತಾರೆ. ಹೀಗಿರುವಾಗ ಚಂದನಳಿಗೆ ದೇಹದಲ್ಲಿ ಲೆನ್ಸ್ ಸಮಸ್ಯೆ ಕಾಣಿಸಿಕೊಂಡಿದ್ದು ಅವರ ಪೋಷಕರು ಮತ್ತದೇ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸುತ್ತಾರೆ.
ಚಂದನ ಚಿಕಿತ್ಸೆ ಫಲಕಾರಿಯಾಗದೇ ಅ.೩ರಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು. ನೊಂದ ಪೋಷಕರು ಚಂದನ ಕಾಲೇಜಿಗೆ ಹೋಗಬೇಡ ಎಂಬ ವಿಚಾರದಲ್ಲಿ ಕಳೆನಾಶಕ ಔಷಧಿಯನ್ನು ಸೇವಿಸಿ ಮೃತಪಟ್ಟಿದ್ದಾಳೆ ಬೇರೆ ಯಾವುದೇ ಕಾರಣಗಳಿಂದ ಅಲ್ಲ. ಆಸ್ಪತ್ರೆಯಲ್ಲಿದ್ದ ಕಾರಣ ತಡವಾಗಿ ಬಂದು ದೂರು ನೀಡುತ್ತಿದ್ದೇವೆ ಎಂದು ಹಾರೋಹಳ್ಳಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
PublicNext
06/10/2022 02:56 pm