ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಮನಗರ: ಲವ್ ಮಾಡಲ್ಲ ಎಂದ ಪ್ರಿಯತಮೆಗೆ ಇರಿದು ಕತ್ತು ಕುಯ್ದುಕೊಂಡ ಪಾಗಲ್ ಪ್ರೇಮಿ

ಚನ್ನಪಟ್ಟಣ : ತಾನು ಪ್ರೀತಿಸುತ್ತಿದ್ದ ಯುವತಿ ಹಲವಾರು ಬಾರಿ ಒತ್ತಾಯಿಸಿದರೂ ಪ್ರೀತಿಸಲು ನಿರಾಕರಿಸಿದ್ದರಿಂದ ಪಾಗಲ್ ಪ್ರೇಮಿ ಆಕೆಯ ಮನೆಗೆ ಹೋಗಿ ಚಾಕುವಿನಿಂದ ಇರಿದು ತಾನು ಕುತ್ತಿಗೆಗೆ ಚಾಕು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ನಗರದ ವರದರಾಜಸ್ವಾಮಿ ದೇವಾಲಯದ ರಸ್ತೆ ಬಳಿಯ ಮನೆಯೊಂದರಲ್ಲಿ ಜರುಗಿದೆ.

ನಗರದ ಸಂಗೀತ ಮೊಬೈಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಪರಿಚಯವಾಗಿ ನಂತರ ಸ್ನೇಹಕ್ಕೆ ಆನಂತರ ಪ್ರೀತಿಗೆ ತಿರುಗಿ ಹಲವಾರು ಬಾರಿ ಯುವತಿಗೆ ಪ್ರೀತಿಸಲು ಒತ್ತಾಯಿಸಿದರೂ ಯುವತಿ ಜಾತಿ ಕಾರಣ ನೀಡಿ ಒಪ್ಪಿಗೆ ಸೂಚಿಸಿರಲಿಲ್ಲ.

ಮಂಗಳವಾರ ಯುವತಿಯ ಮನೆಗೆ ಬಂದು ಪ್ರೀತಿಯನ್ನು ಒಪ್ಪಿಕೊಳ್ಳುವಂತೆ ಪೀಡಿಸಿದ್ದು ಒಪ್ಪದೇ ಇದ್ದುದ್ದರಿಂದ ಯುವತಿಯ ಹೊಟ್ಟೆಗೆ ಚಾಕುವಿನಿಂದ ಇರಿದು ನಂತರ ತಾನು ಕುತ್ತಿಗೆಗೆ ಚಾಕುವಿನಿಂದ ಚುಚ್ಚಿಕೊಂಡಿದ್ದಾನೆ ತಕ್ಷಣ ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮಂಡ್ಯ ಸಾರ್ವಜನಿಕ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲು ಮಾಡಲಾಗಿದೆ ಯುವಕನ ಸ್ಥಿತಿ ಚಿಂತಾಜನಕವಾಗಿದೆ. ಚನ್ನಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
PublicNext

PublicNext

13/09/2022 08:50 pm

Cinque Terre

23.88 K

Cinque Terre

0