ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಮನಗರ : ಡೆತ್ ನೋಟ್ ಬರೆದಿಟ್ಟು ಗೃಹಿಣಿ ನೇಣಿಗೆ ಶರಣು

ರಾಮನಗರ : ಕೌಟುಂಬಿಕ ಕಲಹದಿಂದ ಬೇಸತ್ತ ಗೃಹಿಣಿಯೋರ್ವಳು ಡೆತ್ ನೋಟ್ ಬರೆದಿಟ್ಟು, ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಐಜೂರು ಪೊಲೀಸ್ ಠಾಣೆ ವ್ಯಾಪ್ತಿಯ ಮಾಗಡಿ ರಸ್ತೆಯಲ್ಲಿ ಜರುಗಿದೆ.

ಮೃತೆಯನ್ನು ಬೆಂಗಳೂರು ಕನಕಪುರ ರಸ್ತೆಯ ಸೋಮನಹಳ್ಳಿ ನಿವಾಸಿ ಶಶಿಕಲಾ(೩೩) ಗುರುತಿಸಲಾಗಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ, ಸಂತೋಷ ಎನ್ನುವವರ ಜೊತೆ ಕಳೆದ ೧೧ ವರ್ಷಗಳ ಹಿಂದೆ ವಿವಾಹವಾಗಿದ್ದು, ೫ ವರ್ಷದ ಒಬ್ಬ ಮಗನಿದ್ದಾನೆ.

ಮನೆಯವರ ಅತ್ತೆ ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಅಪ್ಪ ಅಮ್ಮ ಅಮ್ಮನಲ್ಲಿ ಕ್ಷಮೆಯಾಚಿಸುವಂತೆ ಡೆತ್ ನೋಟ್ ಬರೆದಿದ್ದಾರೆ ಐಜೂರು ಪೊಲೀಸರು ಪತಿ ಸಂತೋಷನನ್ನು ಹಾಗು ಅತ್ತೆ ರೇಣುಕಾಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Abhishek Kamoji
Kshetra Samachara

Kshetra Samachara

13/10/2022 04:59 pm

Cinque Terre

7.1 K

Cinque Terre

0