ರಾಯಚೂರು: ಕಲಿಯುಗ ಕಾಮಧೇನು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ 7ನೇ ಬ್ಯಾಚಿನ ನ್ಯಾಯ ಸುಧಾ ವಿದ್ಯಾರ್ಥಿಗಳಿಗೆ ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ಸುಭುದೇಂದ್ರ ತೀರ್ಥರು ಇಂದು ರಾಯರ ಮೂಲ ಬೃಂದಾವನದ ಸನ್ನಿಧಾನದಲ್ಲಿ ಆರಂಭಿಸಿದರು.
ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಪಾಠಶಾಲೆಯ ಎಂಟು ಜನ ವಿದ್ಯಾರ್ಥಿಗಳಿಗೆ ಇಂದು ಮಠದಾವತಿಯಿಂದ ಶಾಂತಿಪಾಠದೊಂದಿಗೆ, ಶ್ರೀಮನ್ಯಾಯ ಸುಧಾ ಪಾಠವನ್ನು ಶ್ರೀಗಳು ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನದ ಸಾನ್ನಿಧಾನದಲ್ಲಿ ನೆರವೇರಿಸಿದರು. ಈ ಸಂದರ್ಭದಲ್ಲಿ ರಾಷ್ಟ್ರಪತಿ ವಿಜೇತರಾದ, ಪಂಡಿತ ಕೇಸರಿ ಡಾ.ರಾಜ.ಎಸ್ ಗಿರಿಯಾಚಾರ್ ಅವರು ಉಪಸ್ಥಿತರಿದ್ದರು.
PublicNext
05/10/2022 05:01 pm