ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಚೂರು : ಗಿಲ್ಲೇಸೂಗೂರು ಗ್ರಾಮದ ದಲಿತರ ಮನೆಯಲ್ಲಿ ಚಹಾ ಸವಿದ ಸಿಎಂ, ಮಾಜಿ ಸಿಎಂ

ರಾಯಚೂರು : ಜನಸ್ಪಂದನ ಕಾರ್ಯಕ್ರಮದ ಯಶಸ್ವಿ ಉದ್ಘಾಟನೆಯ ನಂತರ ಗಿಲ್ಲೇಸೂಗುರು ಗ್ರಾಮದ ದಲಿತ ಕುಟುಂಬ ಅಯ್ಯಪ್ಪ ಕೃಷ್ಣಪ್ಪ ಅವರ ಮನೆಗೆ ಭೇಟಿ ನೀಡಿ ಚಹಾ ಸೇವಿಸಿದ ಸಿಎಂ ಸಚಿವರು.

ರಾಯಚೂರು ತಾಲ್ಲೂಕಿನ ಗಿಲ್ಲೇಸೂಗೂರು ಗ್ರಾಮದಲ್ಲಿ ಇಂದು ಬಿಜೆಪಿ ಪಕ್ಷದ ವತಿಯಿಂದ ಜನಸ್ಪಂದನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮ ಮುಗಿದ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ,

ಸಚಿವರಾದ ಗೋವಿಂದ ಕಾರಜೋಳ, ಶಂಕರ ಪಾಟೀಲ್ ಮುನೇನಕೊಪ್ಪ, ಶಾಸಕರಾದ ರಾಜು ಗೌಡ, ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಮತ್ತಿತರರು ಅಯ್ಯಪ್ಪ ಕೃಷ್ಣಪ್ಪ ಅವರ ನಿವಾಸಕ್ಕೆ ತೆರಳಿ ಚಹಾ ಕುಡಿದು, ಅವರ ಕುಟುಂಬದ ಜೊತೆಗೆ ಸಮಾಲೋಚನೆ ನಡೆಸಿದರು.

Edited By : Abhishek Kamoji
Kshetra Samachara

Kshetra Samachara

11/10/2022 06:53 pm

Cinque Terre

1.68 K

Cinque Terre

0