ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಚೂರು: ಪಕ್ಕದ ಮನೆಯಲ್ಲಿ ಗಂಡು ಹುಟ್ಟಿದ್ರೆ ಇವರು ಪೇಡೆ ಹಂಚುವರು

ರಾಯಚೂರು: ಮೀಸಲಾತಿ ವಿಚಾರದಲ್ಲಿ ಬಿಜೆಪಿ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಆದರೆ ಇದಕ್ಕೂ ಮುನ್ನ ನಾವು ಮೀಸಲಾತಿ ಹೆಚ್ಚಿಸುವ ವಿಚಾರವಾಗಿ ಸಮಿತಿ ರಚಿಸಿದ್ದೆವು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹೀಗಾಗಿ ಕಾಂಗ್ರೆಸ್‌ನವರು ಪಕ್ಕದ ಮನೆಯಲ್ಲಿ ಗಂಡು ಹುಟ್ಟಿದ್ರೆ ಪೇಡೆ ಹಂಚುವ ವರ್ಗಕ್ಕೆ ಸೇರಿದವರು ಎಂದ ಸಿಎಂ ಬಸವರಾಜ್ ಬೊಮ್ಮಾಯಿ ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.

ರಾಯಚೂರು ಜನಸ್ಪಂದನ ಕಾರ್ಯಕ್ರಮಕ್ಕೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ, ರಾಯಚೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮೀಸಲಾತಿ ವಿಚಾರದಲ್ಲಿ ಮೊದಲು ಸಮಿತಿ ರಚಿಸಿದ್ದು ನಾವು ಈಗ ಅದನ್ನ ಬಿಜೆಪಿ ಇಂಪ್ಲಿಮೆಂಟ್ ಮಾಡಿದೆ. ಎಂಬ ಹೇಳಿಕೆ ಟಾಂಗ್ ನೀಡಿದ ಸಿಎಂ ಬಸವರಾಜ್ ಬೊಮ್ಮಾಯಿ 50, 60 ವರ್ಷಗಳ ಹಿಂದಿನಿಂದ ಮೀಸಲಾತಿ ಇದೆ. ಈ ಸಮಸ್ಯೆಯನ್ನ ಬಿಜೆಪಿ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಮೂಲಕ ಮೀಸಲಾತಿ ಜಾರಿ ಮಾಡಿದೆ.

ಆದರೆ ಈ ಮೀಸಲಾತಿ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಎಸ್ಸಿ/ಎಸ್ಟಿ ಮತಗಳು ಬಿಜೆಪಿಗೆ ಹೋಗುತ್ತವೆ ಎಂಬ ಭಯದಲ್ಲಿ, ಕಾಂಗ್ರೆಸ್ ಹೀಗೆ ಮಾತನಾಡುತ್ತಿದೆ. ಆದರೆ ಮೀಸಲಾತಿ ವಿಚಾರದಲ್ಲಿ ರಾಜಕೀಯ ಬೇಡ ಎಂದು ರಾಜಕೀಯ ಪಕ್ಷಗಳಿಗೆ ಸಿಎಂ ಸಲಹೆಯನ್ನು ನೀಡಿದರು.

Edited By : Manjunath H D
PublicNext

PublicNext

11/10/2022 03:39 pm

Cinque Terre

22.72 K

Cinque Terre

6