ರಾಯಚೂರು : ಭಾರತ ಜೋಡೋ ಯಾತ್ರೆ ಆಗಮನದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪೂರ್ವಭಾವಿ ಸಭೆಗಾಗಿ ಅಕ್ಟೋಬರ್ 10 ರಂದು ರಾಯಚೂರಿಗೆ ಆಗಮಿಸಲಿದ್ದಾರೆ.
ಅಕ್ಟೋಬರ್ 21ರಂದು ರಾಹುಲ್ ಗಾಂಧಿ ನೇತೃತ್ವದ ಭಾರತ ಜೋಡೋ ಯಾತ್ರೆ, ರಾಯಚೂರು ಜಿಲ್ಲೆಗೆ ಪ್ರವಾಸ ಮಾಡುವ ಹಿನ್ನೆಲೆಯಲ್ಲಿ ಅದರ ಪೂರ್ವ ಸಿದ್ಧತೆಗಾಗಿ ಅಕ್ಟೋಬರ್ 10ರಂದು ಬೆಳಗ್ಗೆ ರಾಯರಿಗೆ ಆಗಮಿಸಿ ಸಿದ್ದರಾಮಯ್ಯ ರಾಯಚೂರಿನ ಹೊರಹಲಯ ಹರ್ಷಿತ ಗಾರ್ಡನ್ನಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ವಿಶೇಷವಾಗಿ ರಾಹುಲ್ ಗಾಂಧಿ ಎರಡು ದಿನಗಳ ಕಾಲ ರಾಯಚೂರು ಜಿಲ್ಲೆಯಲ್ಲಿ ಪ್ರವಾಸ ಮಾಡುವ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ವಾಜ್ಪೇಯ್ ಮಾಡುವ ಸ್ಥಳಗಳ ಪರಿಶೀಲನೆ ಸಹ ಮಾಡುವ ಸಾಧ್ಯತೆ ಇದೆ.
Kshetra Samachara
08/10/2022 12:59 pm