ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಚೂರು: ಮನೆ ಗೋಡೆ ಕುಸಿತ: 24 ಗಂಟೆಯಲ್ಲಿ ಮೃತ ಕುಟುಂಬಕ್ಕೆ 15 ಲಕ್ಷ ರೂಪಾಯಿ ಪರಿಹಾರ ನೀಡಿದ ಶಾಸಕ

ರಾಯಚೂರು: ಅಕಾಲಿಕ ಮಳೆಯಿಂದ ಗೋಡೆ ಕುಸಿದು ಒಂದೇ ಕುಟುಂಬದ ಪರಮೇಶ, ಜಯಮ್ಮ, ಭರತ ಮೂರು ಜನರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ 24 ಗಂಟೆಯಲ್ಲಿ ಶಾಸಕ ಬಸನಗೌಡ ದದ್ದಲ್ ಅವರು ಕುಟುಂಬಕ್ಕೆ 15 ಲಕ್ಷ ಪರಿಹಾರದ ಚೆಕ್ ನೀಡಿದರು.

ಹೌದು ನಿನ್ನೆಯಷ್ಟೇ ಭಾರಿ ಮಳೆಗೆ ಮನೆಯ ಗೋಡೆ ಕುಸಿದು ಮೂವರು ಮೃತಪಟ್ಟ ಕಹಿ ಘಟನೆ ಜರುಗಿತ್ತು. ಕುಟುಂಬಸ್ಥರ ಆಕ್ರಂದನಕ್ಕೆ ಮಣಿದ ಶಾಸಕರು 24 ಗಂಟೆಯಲ್ಲಿ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಜಿಲ್ಲಾಡಳಿತದ ಮುಖಾಂತರ ತಹಶೀಲ್ದಾರ್ ಚಂದ್ರಕಾಂತ್ ಸಮ್ಮುಖದಲ್ಲಿ 15 ಲಕ್ಷ ರೂಪಾಯಿ ಚೆಕ್ ವಿತರಣೆ ಮಾಡಿದ್ರು.

Edited By : Manjunath H D
PublicNext

PublicNext

04/10/2022 01:15 pm

Cinque Terre

9.34 K

Cinque Terre

1