ರಾಯಚೂರು : ರಾಹುಲ್ ಗಾಂಧಿ ಭಾರತ ಜೋಡೋ ಯಾತ್ರೆಗೆ ವಿಗ್ನ ಎದುರಾಗಿದೆ, ಜಿಲ್ಲಾ ಕಾಂಗ್ರೆಸ್ ಒಳ ಜಗಳ ಇದೀಗ ರಾಜ್ಯ ಮುಖಂಡರ ಮುಂದೆಯೇ ಕಿತ್ತಾಡಿಕೊಳ್ಳುವ ಮೂಲಕ ಹೊರ ಬಿದ್ದಿದ್ದು ಒಗ್ಗಟ್ಟಿನ ಕೊರತೆ ಎದುರಾಗಿದೆ.
ಹೌದು ಭಾರತ ಜೋಡೋ ಕಾರ್ಯಕ್ರಮದ ಪೂರ್ವಿ ಭಾವಿ ಸಭೆಯು ಕಲ್ಯಾಣ ಕರ್ನಾಟಕ ಉಸ್ತುವಾರಿ ಶ್ರೀಧರ್ ಬಾಬು ಮತ್ತು ಪಕ್ಷದ ಕಾರ್ಯಾಧ್ಯಕ್ಷ ಮಾಜಿ ಸಚಿವ ಈಶ್ವರ್ ಖಂಡ್ರೆ ಅವರ ನೇತೃತ್ವದಲ್ಲಿ ನಡೆಯಿತು. ಈ ಒಂದು ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದಲ್ಲಿ ಎರಡು ಬಣಗಳಿವೆ ಎಂಬುದು ಸಾಬೀತಾಗಿದೆ. ರಾಯಚೂರು ಜಿಲ್ಲಾ ಕಾಂಗ್ರೆಸ್ ನಲ್ಲಿ ವಸಂತಕುಮಾರ್ ಮತ್ತು ಎನ್ ಎಸ್ ಭೊಸರಾಜು ಎರಡು ಬಣಗಳಿವೆ. ಹಲವು ವರ್ಷಗಳಿಂದ ಈ ಎರಡು ಬಣಗಳ ನಡುವೆ ಒಳ ಜಗಳವಿತ್ತೆ ಹೊರತು ಅದು ಬೀದಿಗೆ ಬಂದಿರಲಿಲ್ಲ.
ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವಂತಹ ಭಾರತ ಚೋಡೊ ಯಶಸ್ವಿ ಮಾಡಲು ರಾಜ್ಯದ್ಯಂತ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಇದರ ಮಧ್ಯ ರಾಯಚೂರಿನಲ್ಲೂ ಕೂಡ ರಾಜ್ಯನಾಯಕರ ಮೇಲಿಂದ ಮೇಲೆ ಆಗಮಿಸಿ ಪೂರ್ವಭಾವಿ ಸಭೆಗಳನ್ನ ಮಾಡುತ್ತಿದ್ದಾರೆ. ಆದರೆ ನಿನ್ನೆ ರಾಯಚೂರು ಜಿಲ್ಲಾ ಕಾಂಗ್ರೆಸ್ ನಲ್ಲಿ ಮನೆಯೊಂದು ಎರಡು ಬಾಗಿಲು ಎಂಬಂತೆ ಆಗಿದೆ. ರಾಜ್ಯ ನಾಯಕರ ಮುಂದೆ ಕೈ ಕೈ ಮಿಲಾಯಿಸಿ ಜಗಳವಾಡಿದ ಘಟನೆ ನಡೆದಿದೆ. ಪೂರ್ವಿಭಾವಿ ಸಭೆಯಲ್ಲಿ ಮಾತಿಗೆ ಮಾತು ಬೆಳೆದು ರಾಜ್ಯ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ ಅವರಿಗೆ ವಸಂತ್ ಕುಮಾರ್ ಬಣದ ಕಾರ್ಯಕರ್ತರು ಥಳಿಸಿರುವುದು ಬೆಳಕಿದೆ ಬಂದಿದೆ. ಇದರಿಂದ ರಾಜ್ಯ ನಾಯಕರಲ್ಲಿ ಹೊಸತಲೆನೋವೊಂದು ಆರಂಭವಾಗಿದೆ.
Kshetra Samachara
27/09/2022 12:31 pm