ರಾಯಚೂರು : ಎನ್‌ಐಎ ಮತ್ತು ಇಡಿ ಯವರು ಸರಣಿ ದಾಳಿ ಮಾಡಿದ್ದರಿಂದ ಇಡೀ ಭಾರತದಲ್ಲಿ ಒಂದು ಒಳ್ಳೆಯ ದಿನ ಎರಡು ದಿನಗಳ ಹಿಂದೆ ಕಂಡುಬಂದಿದೆ ಎಂದು ರಾಯಚೂರಿನಲ್ಲಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ರಾಯಚೂರು ನಗರದಲ್ಲಿ ಯುವಬ್ರಿಗೇಡ್ ಆಯೋಜಿಸಿದ್ದ ಉಘೇ ಕಲ್ಯಾಣ ಕರ್ನಾಟಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಎನ್‌ಐಎ, ಇಡಿ ಮತ್ತು ಆ್ಯಂಟಿ ಟೆರರಿಸ್ಟ್ ಸ್ಕ್ವಾರ್ಡ್ ಸರಣಿ ದಾಳಿ ಮಾಡಿದೆ. ವಿದೇಶದಲ್ಲಿ ಕೂಡ ರಾ ಕೂಡ ಉತ್ತಮ ಕಾರ್ಯನಿರ್ವಹಿಸಿ ಎಲ್ಲರ ಬುಡವನ್ನ ಕಟ್ ಮಾಡಿದೆ ಅಂದ್ರೆ ತಪ್ಪಾಗಲಿಕ್ಕಿಲ್ಲ. ಪಿಎಫ್ ಐ ಮೇಲೆ ನಡೆದ ದಾಳಿ ಅದರ ಸುತ್ತಲಿನ ಚಟುವಟಿಕೆಗಳಿಗೂ ಹೊಡೆತ ಕೊಟ್ಟಿದೆ ಎಂದು ಹೇಳಿದರು.
PublicNext
25/09/2022 02:04 pm