ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಚೂರು: ಜಿಲ್ಲೆಯಲ್ಲಿ ಸುಖ ಶಾಂತಿ ನೆಮ್ಮದಿಯಿಂದ ಬಾಳೋಣ: ಎಸ್ಪಿ

ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಇಂದು ಆಯುಧ ಪೂಜೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಎಲ್ಲಾ ಶಸ್ತ್ರಾಸ್ತ್ರಗಳಿಗೆ ಪೂಜೆ ಸಲ್ಲಿಸಿದ ಎಸ್ಸಿ ನಿಖಿಲ್ ಬಿ ಅವರು ನಾಡಿನ ಜನತೆಗೆ ರಾಯಚೂರು ಜಿಲ್ಲಾ ಪೊಲೀಸ್ ವತಿಯಿಂದ ದಸರಾ ಹಬ್ಬದ ಶುಭಾಶಯಗಳು ಕೋರಿದರು.

ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪ್ರತಿವರ್ಷ ದಸರಾ ಆಯುಧ ಪೂಜೆಯಲ್ಲಿ ಇಲಾಖೆಯಲ್ಲಿ ಇರುವಂತಹ ಆಯುಧಗಳಿಗೆ ಪೂಜೆ ಮಾಡಲಾಗುತ್ತದೆ. ಕಾರಣ ಈ ಆಯುಧಗಳು ಮುಂದಿನ ದಿನಗಳಲ್ಲಿ ಸದಾ ಸಿದ್ಧತೆಯಲ್ಲಿ ಇರಲಿ ಎಂಬ ನಿಟ್ಟಿನಲ್ಲಿ ಈ ಒಂದು ಪೂಜೆಯನ್ನ ಮಾಡಲಾಗುತ್ತದೆ. ಜೊತೆಗೆ ನಾಡಿನಲ್ಲಿ, ದಸರಾ ಹಬ್ಬದ ಮುಖಾಂತರ ಸುಖ ಶಾಂತಿ ನೆಮ್ಮದಿಯಿಂದ ನಾವೆಲ್ಲರೂ ಬಾಳೋಣ ಎಂದು ಎಲ್ಲರಿಗೂ ಶುಭಾಶಯ ಕೋರಿದರು.

Edited By : Manjunath H D
PublicNext

PublicNext

04/10/2022 01:15 pm

Cinque Terre

17.09 K

Cinque Terre

0