ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಚೂರಿನಲ್ಲಿ ಇಬ್ಬರಲ್ಲಿ ಕೋವಿಡ್ ಸೋಂಕು ಪತ್ತೆ

ರಾಯಚೂರು: ದೇಶದಾದ್ಯಂತ ಮತ್ತೆ ಸದ್ದು ಮಾಡ್ತಿದ್ದ ಕೋವಿಡ್ ಸೋಂಕು ಈಗ ರಾಯಚೂರಿಗೂ ಕಾಲಿಟ್ಟಿದೆ. ಜಿಲ್ಲೆಯಲ್ಲಿ ಇದೀಗ ಇಬ್ಬರಿಗೆ ಕೋವಿಡ್ ಸೋಂಕು ತಗುಲಿದ ಬಗ್ಗೆ ಮಾಹಿತಿ ತಿಳಿದು ಬಂದಿದೆ.

ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಓರ್ವನಿಗೆ ಹಾಗೂ ಸಿರಿವಾರ ತಾಲೂಕಿನ ಮಾಡಗಿರಿ ಗ್ರಾಮದ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಸಿರಿವಾರ ತಾಲೂಕಿನ ಮಾಡಗಿರಿಯ 17 ವರ್ಷದ ಯುವಕನಲ್ಲಿ ಸೋಂಕು ಪತ್ತೆಯಾಗಿದೆ .

ಸದ್ಯಕ್ಕೆ ಇವರಲ್ಲಿ ಯಾವುದೇ ಟ್ರಾವೆಲ್ ಹಿಸ್ಟರಿ ಬಗ್ಗೆ ಮಾಹಿತಿ ಸಿಕ್ಕಿಲ್ಲ, ಹೋಂ ಕ್ವಾರಂಟೈನ್‌ನಲ್ಲಿ ಮಾನವಿ ಪಟ್ಟಣದ ವ್ಯಕ್ತಿಯನ್ನ ಇರಿಸಿದ್ದಾರೆ. ಮತ್ತೋರ್ವ ಸೋಂಕಿತ ಆರೋಗ್ಯ ಇಲಾಖೆ ಸಿಬ್ಬಂದಿ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಸಿಬ್ಬಂದಿ ಹುಡುಕಾಟದ ಕೆಲಸದಲ್ಲಿ ಇದ್ದಾರೆ ಎಂದು ತಿಳಿದು ಬಂದಿದೆ.

Edited By : Nagaraj Tulugeri
PublicNext

PublicNext

29/12/2023 07:33 pm

Cinque Terre

12.89 K

Cinque Terre

0