ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಚೂರು: 'ಬೆಂಬಲ ಬೆಲೆ ಜಾರಿಗೆ ತನ್ನಿ ಇಲ್ಲ, ಋಣ ಮುಕ್ತ ಕಾಯ್ದೆ ಜಾರಿಗೆ ತರ್ಬೇಕು'!

ಸಿಂಧನೂರು : ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಖಾತ್ರಿ ಜಾರಿಗೆ ತನ್ನಿ ಇಲ್ಲವೆಂದರೆ ಕೊನೆ ಪಕ್ಷ ಋಣ ಮುಕ್ತ ಕಾಯ್ದೆಯನ್ನಾದರು ಜಾರಿಗೆ ತರಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯ ದರ್ಶಿಯಾದ ಯು.ಬಸವರಾಜ ಕೇಂದ್ರ ಬಿಜೆಪಿ ಸರ್ಕಾರವನ್ನು ಒತ್ತಾಯಿಸಿದರು.

ದೇಶದಲ್ಲಿರುವ 2 ಕೊಟಿ ಸವಳಿ ಭೂಮಿಯನ್ನು ಅಭಿವೃದ್ಧಿಪಡಿಸುವ ನೆಪದಲ್ಲಿ ಸರ್ಕಾರ ಖಾಸಗಿ ಕಂಪನಿಗೆ ಮಾರಲು ಹೊರಟಿದೆ ಸವಳಿ ಭೂಮಿಗೆ ಸೌಲಭ್ಯ ನೀಡಿ ಅಭಿವೃದ್ಧಿಪಡಿಸಿ ರೈತರಿಗೆ ಅನುಕೂಲ ಮಾಡದೆ ಖಾಸಗಿ ಕಂಪನಿಗೆ ಮಾರಾಟ ಮಾಡಿದರೆ ಇದರಿಂದ ಬಡವರು ಸಣ್ಣ ರೈತರು ಕೃಷಿ ಕೂಲಿ ಕಾರ್ಮಿಕರು ಬೀದಿಗೆ ತಳ್ಳುವ ಸರ್ಕಾರದ ಉದ್ದೇಶ ವಾಗಿದೆ ಎಂದರು.

ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡಿದರು ಸಹ ರಾಜ್ಯ ಸರ್ಕಾರ ಮಾತ್ರ ರದ್ದುಗೊಳಿಸದೆ ರೈತರ ಮೋಸ ಮಾಡುತ್ತಿದೆ. ಈಗಿರುವ ಸೌಲಭ್ಯಗಳನ್ನು ಉಳಿಸುವ ಬದಲು ಅವಗಳನ್ನು ರದ್ದು ಮಾಡಲು ಆಸಕ್ತಿ ತೋರುವ ಸರ್ಕಾರ ಹೊಸ ಸೌಲಭ್ಯ ಜನರಿಗೆ ತರುವುದು ಕನಸಿನ ಮಾತಾಗಿದೆ.

ಖಾಸಗಿ ಶಾಲೆಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸರ್ಕಾರ 13800 ಸರ್ಕಾರಿ ಶಾಲೆಗಳನ್ನು ರದ್ದುಗೊಳಿಸಿಲು ಹೊರಟಿದೆ ರೈತರು ತಾವೆ ತಮ್ಮ ಭೂಮಿಯನ್ನು ಸರ್ಕಾರಕ್ಕೆ ಕೊಡಬೇಕು ಇಲ್ಲದಿದ್ದರೆ. ಭೂಮಿಯನ್ನು ಸರ್ಕಾರವೆ ಬಲವಂತದಿಂದ ರೈತರ ಭೂಮಿಯನ್ನು ಕಿತ್ತಿ ಕೊಳ್ಳುತಿದೆ ಎಂದರು.

ರಾಜ್ಯದ ಕೃಷಿ ರಂಗದ ಪರಿಸ್ಥಿತಿ ಬಗ್ಗೆ ಚರ್ಚೆಮಾಡಿ ಸಂಬಂಧಿಸಿದ ವರದಿಯನ್ನು ಅಂಗೀಕಾರ ಮಾಡುವ ಸಲುವಾಗಿ ಅಕ್ಟೋಬರ 14,15,16 ಮೂರು ದಿನಗಳ ಕಾಲ ರಾಯಚೂರು ನಗರದ ಹರ್ಷಿತಾ ಗಾರ್ಡನ್ ದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ 17ನೇ ರಾಜ್ಯ ಸಮ್ಮೇಳನ ನಡೆಸಲಾಗುತ್ತದೆ ಎಂದರು.

Edited By : Abhishek Kamoji
Kshetra Samachara

Kshetra Samachara

09/10/2022 04:26 pm

Cinque Terre

1.18 K

Cinque Terre

0