ಸಿಂಧನೂರು : ನಗರದ ಅರುಣೋದಯ ಶಾಲಾ ಆಡಳಿತ ಮಂಡಳಿಯ ತಿಕ್ಕಾಟದಿಂದ ಶಾಲೆಯಲ್ಲಿ ಓದುತ್ತಿರುವಂತಹ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ ಪರಿಸ್ಥಿತಿಗೆ ತಲುಪಿದ್ದು ಇದೀಗ ಬಿಇಓ ಅವರ ಅಂಗಳಕ್ಕೆ ಈ ನ್ಯಾಯ ತಲುಪಿದೆ. ಅದೇನೇ ತಿಕ್ಕಾಟವಿದ್ದರೂ ಮಕ್ಕಳಿಗೆ ಅನ್ಯಯವಾಗದಂತೆ ನೋಡಿಕೊಳ್ಳಬೇಕು ಎಂದು ಕನ್ನಡ ಪರ ಸಂಘಟನೆಯಿಂದ ಒತ್ತಾಯಿಸಲಾಗುತ್ತಿದೆ.
ಅರುಣೋದಯ ಶಾಲೆಯ ಆಡಳಿತ ಮಂಡಳಿ ತಿಕ್ಕಾಟದಿಂದ ಶಾಲಿಯ ನವೀಕರಣ ಮಾಡಿಕೊಂಡಿಲ್ಲ ಅಲ್ಲದೆ ಭೂಮಿ ವಿಚಾರಕ್ಕೆ ಸಂಬಂಧಿಸಿದಂತೆ ಒಳ ಜಗಳಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ, ಶಾಲೆಯ ನವೀಕರಣವಾಗಿಲ್ಲ ಇದರಿಂದ ಪರೀಕ್ಷೆಯ ಹಾಲ್ ಟಿಕೆಟ್ ಕೂಡ ನೀಡುವ ಒಂದು ಅನುಮಾನ ಇರುವ ಕಾರಣ ಪೋಷಕರು ಮತ್ತು ಕನ್ನಡ ಪರ ಸಂಘಟನೆಗಳು ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡಿ ವಿದ್ಯಾರ್ಥಿಗಳಿಗೆ ಯಾವುದೇ ಅನ್ಯಾಯವಾಗದಂತೆ ಕ್ರಮವಹಿಸಬೇಕು ಎಂದು ಮನವಿ ನೀಡಿದ್ದಾರೆ. ಅಲ್ಲದೇ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಬೇರೆ ಪ್ರೌಢ ಶಾಲೆಗೆ ಟ್ಯಾಗ್ ಮಾಡಿಯಾದರೂ ಹಾಲ್ ಟಿಕೆಟ್ ನೀಡಿ ಪರೀಕ್ಷೆ ಬರೆಯಲು ಅನುಕೂಲ ಕಲ್ಪಿಸಬೇಕು' ಎಂದು ಕನ್ನಡ ಜಾಗೃತಿ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಉಮೇಶಗೌಡ ಅರಳಹಳ್ಳಿ ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಶರಣಪ್ಪ ವಟಗಲ್ ಆದಾಗ್ಯೂ ಆಡಳಿತ ಮಂಡಳಿಯನ್ನು ಕರೆಯಿಸಿ ಚರ್ಚಿಸುತ್ತೇವೆ. ಶಾಲೆಯ ಮಾನ್ಯತೆ ನವೀಕರಣ ಮಾಡಿಸಿ ಕೊಂಡರೆ ಒಳಿತು. ಇಲ್ಲದಿದ್ದರೆ ಮಾನ್ಯತೆಯನ್ನು ರದ್ದುಪಡಿಸುತ್ತೇನೆ. ಆ ಶಾಲೆಯಲ್ಲಿ ಓದುತ್ತಿರುವ ಹತ್ತನೇ ತರಗತಿಯ 28 ವಿದ್ಯಾರ್ಥಿಗಳನ್ನು ಸಮೀಪದ ಪ್ರೌಢ ಶಾಲೆಗೆ ಟ್ಯಾಗ್ ಮಾಡಿ ಹಾಲ್ ಟಿಕೆಟ್ ನೀಡಿ ಪರೀಕ್ಷೆ ಬರೆಯಲು ಅನುಕೂಲ ಕಲ್ಪಿಸಲಾಗುವುದು ಎಂಸು ಪಾಲಕರಿಗೆ ಭರವಸೆ ನೀಡಿದರು.
PublicNext
13/10/2022 04:43 pm