ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಚೂರು: ಅಕ್ರಮ ಮರಳು ಸಾಗಟ ಮಾಡುತ್ತಿದ್ದ 16 ಟ್ರ್ಯಾಕ್ಟರ್ ವಶಪಡಿಸಿಕೊಂಡ ಪೊಲೀಸರು

ಸಿಂಧನೂರು : ಪೋಲಿಸರ ಕಣ್ಣು ತಪ್ಪಿಸಿ ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದ ಖಚಿತ ಮಾಹಿತಿ ಮೇರೆಗೆ ಗ್ರಾಮೀಣ ಠಾಣೆಯ ಪೋಲಿಸರು ದಾಳಿ ಮಾಡಿ ಸುಮಾರು 16 ಟ್ರ್ಯಾಕ್ಟರ್‌ಗಳನ್ನು ವಶಪಡಿಸಿಕೊಂಡು ಠಾಣೆಗೆ ತಂದಿದ್ದು ಇದರಿಂದ ಉಳಿದ ಅಕ್ರಮ ಮರಳು ಸಾಗಾಣಿಕೆ ದೂರಲ್ಲಿ ನಡುಕ ಹುಟ್ಟಿಸಿದೆ.

ಗ್ರಾಮೀಣ ಪೊಲೀಸ ಠಾಣೆಯ ಪಿಎಸ್‌ಐ ಯರೆಯಪ್ಪ ತಿರುಪತಿಯ ಹೋಗಿದ್ದರಿಂದ ಇದೆ ನೆಪ ಮಾಡಿಕೊಂಡ ಅಕ್ರಮ ಮರಳು ದಂಧೆ ಕೋರರು ರಾಜ ಧನವಿಲ್ಲದೆ ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದ ಬಗ್ಗೆ ಸ್ಥಳೀಯರು ಅಕ್ರಮ ಮರಳು ಸಾಗಾಣಿಕೆ ಬಗ್ಗೆ ಜಿಲ್ಲಾ ಪೋಲೀಸ ವರಿಷ್ಠಾದಿಕಾರಿಗಳಿಗೆ ದೂರವಾಣಿ ಮಾಡಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಜಿಲ್ಲಾ ಪೋಲೀಸ ವರಿಷ್ಠಾದಿಕಾರಿಗಳ ಆದೇಶದ ಮರೇಗೆ ಗ್ರಾಮೀಣ ಪೊಲೀಸ ಠಾಣೆಯ ಪಿಎಸ್‌ಐ ಯರೆಯಪ್ಪ ಸಿಬ್ಬಂದಿಗಳಾದ ಶೇಟಪ್ಪ ರಾಘವೇಂದ್ರ ಗೋಪಾಲ ಸೇರಿದಂತೆ ಇತರ ಸಿಬ್ಬಂದಿಗಳೊಂದಿಗೆ ನಿನ್ನೆ ರಾತ್ರಿ ದಾಳಿ ಮಾಡಿ ಕೆಂಗಲ್ ಗ್ರಾಮದ ಬಳಿ ನದಿಯಲ್ಲಿ ಅಕ್ರಮ ಮರಳು ಸಾಗಾಣಿಕೆಯಲ್ಲಿ ತೋಡಗಿದ್ದ 16 ಟ್ರಾಕ್ಟರಗಳನ್ನು ವಶಪಡಿಸಿಕೊಂಡಿದ್ದು ಚಾಲಕರು ಮಾಲಿಕರು ಓಡಿಹೊಗಿದ್ದಾರೆ ಎಂದು ಹೇಳಲಾಗುತ್ತಿದೆ.

16 ಟ್ರ್ಯಾಕ್ಟರ್‌ಗಳನ್ನು ವಶಪಡಿಸಿಕೊಂಡು ಕಲಂ 379 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು ಚಾಲಕರು ಮಾಲಿಕರ ಪತ್ತೆಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಗ್ರಾಮೀಣ ಪೊಲೀಸ ಠಾಣೆಯ ಪಿಎಸ್‌ಐ ಯರೆಯಪ್ಪ ತಿಳಿಸಿದರು.

Edited By : Nagaraj Tulugeri
Kshetra Samachara

Kshetra Samachara

28/09/2022 10:10 pm

Cinque Terre

3.66 K

Cinque Terre

0