ರಾಯಚೂರು: ಜಿಲ್ಲೆ ಮತ್ತು ರಾಜ್ಯದ ರೈತರ ಸಮಸ್ಯೆಗಳನ್ನ ಚರ್ಚಿಸುವ ನಿಟ್ಟಿನಲ್ಲಿ, ಕರ್ನಾಟಕ ಪ್ರಾಂತ ರೈತ ಸಂಘದ 17ನೇ ರಾಜ್ಯ ಸಮ್ಮೇಳನ ಸ.14 ರಿಂದ 16 ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಡಿ.ವೀರನಗೌಡ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು,ಸಮ್ಮೇಳನವು ನಗದ ಹರ್ಷಿತ ಗಾರ್ಡನ್ ನಲ್ಲಿ ನಡೆಯಲಿದೆ ಎಂದರು.
ರಾಜ್ಯ ಬಿಜೆಪಿ ಸರ್ಕಾರ ರೈತ ವಿರೋಧಿ ನೀತಿಗಳನ್ನು ಜಾರಿಗೆ ತಂದು ಕೃಷಿಯನ್ನು ನಾಶ ಮಾಡಲು ಮುಂದಾಗಿದೆ. ಈ ಸರ್ಕಾರ ಕಮಿಷನ್ ಗಾಗಿ ಕೆಲಸ ಮಾಡುತ್ತಿದೆ ಆರೋಪಿಸಿದರು. ನಮ್ಮ ಜಿಲ್ಲೆಯಲ್ಲಿ ಆಚರಿಸಲು ಉದ್ದೇಶಿತವೇನೆಂದರೆ ನಮ್ಮ ಜಿಲ್ಲೆಯಲ್ಲಿ ಎರಡು ಜೀವನದಿಗಳಾದ ಕೃಷ್ಣ ಮತ್ತು ತುಂಗಭದ್ರಾ ಭಾಗದಲ್ಲಿ 7 ತಾಲೂಕಗಳನ್ನು ಹೊಂದಿದೆ. ರೈತನಿಗೆ ಒಕ್ಕಲುತನ ನಿರ್ವಹಿಸಲು ಒಕ್ಕಲಿಗನಿಗೆ ದುಡಿಯುವ ರೈತನಿಗೆ ಭೂಮಿ, ಭೂಮಿಗೆ ನೀರಾವರಿ ಉತ್ತಮ ಗುಣಮಟ್ಟದ ಬೀಜ,ರಸಗೊಬ್ಬರ ಕ್ರಿಮೀ ಸಂಹಾರಕಗಳು ಹಾಗೂ ಪ್ರಮುಖವಾಗಿ ಒಕ್ಕಲುತನ ಉತ್ಪಾದನೆಯ ಧಾನ್ಯಗಳಿಗೆ ಮಾರಾಟ ಮಾಡಲು ಮಾರುಕಟ್ಟೆ ಬೇಕಾಗುತ್ತದೆ ಎಂದರು.
ಜಿಲ್ಲೆಯು ಎರಡು ಜೀವ ನದಿಗಳಾದ ಕೃಷ್ಣ ಮತ್ತು ತುಂಗಭದ್ರ ನದಿಗಳ ಮಧ್ಯ ಭಾಗದಲ್ಲಿ ಇದ್ದು ನಮ್ಮ ಜಿಲ್ಲೆಯ 1972 ಕೇಂದ್ರ ಸರಕಾರದ ಸರ್ವೆಯಂತೆ ಲಿಂಗಸುಗೂರು ತಾಲೂಕು 1669 ಚ.ಕಿ.ಮೀ. ದೇವದುರ್ಗ 1501 ಚ.ಕಿ.ಮೀ. ರಾಯಚೂರು 1541 ಚ .ಕಿಮೀ.3 ತಾಲೂಕನಲ್ಲಿ ಒಟ್ಟು 4937 ಚ. ಕಿಮೀ. ಬರಪೀಡಿತ ಪ್ರದೇಶ ವಿದ್ದು ಈ ಪ್ರದೇಶದ ಅಭಿವೃದ್ಧಿಗಾಗಿ ಕೇಂದ್ರ ಸರಕಾರವು ಸಿ.ಡಬ್ಲ್ಯೂಸಿ,ಯೋಜನೆಯಂತೆ ನಿಗದಿತ ಸಮಯದಲ್ಲಿ ಅಭಿವೃದ್ಧಿ ಪಡಿಸಲು ಬಚಾವತ್ ಟ್ರಿಮಿನಲ್ ತೀರ್ಪಿನಲ್ಲಿ ಆದೇಶಿಸಿದ್ದು ಈ ದಿನದವರೆಗೆ ಯಾವುದೇ ಪ್ರಯೋಜನೆ ಆಗಿಲ್ಲ.
ಈ ಸಂದರ್ಭದಲ್ಲಿ ಕೆ.ಜಿ.ವೀರೇಶ್, ನರಸಣ್ಣ ನಾಯಕ ಇದ್ದರು.
PublicNext
23/09/2022 04:11 pm