ರಾಯಚೂರು : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿ ಬಳಿಯ ತುಂಗಭದ್ರಾ ನದಿಯಲ್ಲಿರೋ ನರಹರಿ ಆರಾಧನೆಗೆ ಹೊರಟಿದ್ದ ವಿದ್ಯಾರ್ಥಿಗಳ ವಾಹನ ಪಲ್ಟಿ ಆಗಿದೆ. ಇದರ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, 10 ಜನರಿಗೆ ಗಾಯಗೊಂಡಿರೋ ಘಟನೆ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಅರಗಿನಮರ ಕ್ಯಾಂಪ್ ಬಳಿ ನಡೆದಿದೆ.
ಅಪಘಾತದಲ್ಲಿ ಮೃತರಾದವರನ್ನ ಮಂತ್ರಾಲಯ ಮಠದ ಸಾಂಸ್ಕೃತ ವಿದ್ಯಾರ್ಥಿಗಳೆಂದು ಹೇಳಲಾಗ್ತಿದ್ದು ಅಯ್ಯವಂದನ್ (18), ಸುಜೇಂದ್ರ (22), ಅಭಿಲಾಷ (20) ಮೂವರು ವಿದ್ಯಾರ್ಥಿಗಳು ಅಂತ ಗುರುತಿಸಿದ್ರೆ, ಮತ್ತೊಬ್ಬನನ್ನ ವಾಹನ ಚಾಲಕ ಶಿವು (24) ಅಂತ ಹೇಳಲಾಗ್ತಿದೆ.
ಬೆಳಗಿನಜಾವ ಮಂತ್ರಾಲಯದಿಂದ ಹಂಪಿಯ ನರಹರಿ ತೀರ್ಥರ ಆರಾಧನೆಗೆ ಬರ್ತಿರುವಾಗ ಸಿಂಧನೂರು ಬಳಿ ವಾಹನ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಅಂತ ಪೊಲೀಸ್ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.
ಇನ್ನು, ಗಾಯಗೊಂಡ 10 ಜನರಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದ್ದು, ಘಟನಾ ಸ್ಥಳಕ್ಕೆ ಸಿಂಧನೂರು ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾತ್ರಿಯೇ ಮೃತದೇಹಗಳ ಪೋಸ್ಟ್ ಮಾರ್ಟಮ್ ಮುಗಿಸಿ ಶವಗಳನ್ನ ಪೊಲೀಸರು ಪೋಷಕರಿಗೆ ಹಸ್ತಾಂತರ ಮಾಡಿದ್ದಾರೆ. ಭೀಕರ ಅಪಘಾತ ಸಂಬಂಧ ಸಿಂಧನೂರು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
22/01/2025 05:34 pm