ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹರಾಜಿಗೆ ಬಂತೇ ಅಜ್ಜಿ ಆಸ್ತಿ? ಫೋರ್ಜರಿ ಸಹಿ ಮಾಡಿ ಲಕ್ಷಗಟ್ಟಲೆ ಹಣ ವಿಥ್ ಡ್ರಾ ಶಂಕೆ!

ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿದ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧಿಕಾರಿಗಳು ವಾಸ್ತವದ ಅರಿವಿದ್ದೂ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಹೂಡಿದ್ದಾರೆ. ನಾಗರಾಜ ಪೂಜಾರಿ ಸಾಲಕ್ಕೆ ಅಮಲ್ಜಾರಿ ಕಡತಗೊಂಡು ಅಮಲ್ಜಾರಿ ಕಡತದ ವಸೂಲಾತಿಯಂತೆ ಸ್ಥಿರಾಸ್ತಿ ಹರಾಜಿಗೆ ಸೊಸೈಟಿ ವತಿಯಿಂದಲೇ ಬಿಡ್ಡುದಾರರಾಗಿ ಭಾಗವಹಿಸಲು ಅಧಿಕಾರ ನೀಡುವ ಮಟ್ಟಕ್ಕೆ ಬಂದು ನಿಂತಿದೆ. ಆ ಮೂಲಕ ನ್ಯಾಯಕ್ಕಾಗಿ ಪಬ್ಲಿಕ್ ನೆಕ್ಸ್ಟ್ ಮೊರೆ ಹೋದ ಪುಟ್ಟಿ ಪೂಜಾರ್ತಿಯ ಕುಟುಂಬವನ್ನು ಅಕ್ಷರಶಃ ಬೀದಿಗೆ ತಂದು ನಿಲ್ಲಿಸಲು ಸೊಸೈಟಿ ಕುತಂತ್ರ ನಡೆಸುತ್ತಿದೆ.

ಎರಡು ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ರಾಷ್ಟ್ರೀಕೃತ ಬ್ಯಾಂಕಿನ ಮೂಲಕವೇ ಹಣ ಪಾವತಿಸಿಕೊಳ್ಳುವ ನಿಯಮವಿದ್ದರೂ ವೋಚರ್ ಬಳಸಿ 9 ಲಕ್ಷ, 7 ಲಕ್ಷ, 5ಲಕ್ಷ, 3.5ಲಕ್ಷ ಹೀಗೇ ಹಲವು ಫೋರ್ಜರಿ ಸಹಿ ಹಾಕಿದ ವೋಚರ್ಗಳ ಮೂಲಕ ಹಣ ಸಂದಾಯ ಮಾಡಲಾಗಿದೆ ಎನ್ನುವ ಶಂಕೆ ವ್ಯಕ್ತವಾಗಿದೆ.

ಸಹಕಾರಿ ಸಂಘಗಳ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದ್ದ ಸಹಕಾರಿ ಸಂಘವೊಂದು ತನ್ನ ಚೇಲಾಗಳ ರಕ್ಷಣೆಗೆ ಮುಂದಾಗಿ ಬಡಕುಟುಂಬವೊಂದನ್ನು ಬೀದಿಗೆ ತಂದು ನಿಲ್ಲಿಸುತ್ತಿದೆ. ಆದ್ರೂ ಸ್ಥಳೀಯ ಜನಪ್ರತಿನಿಧಿಗಳಾಗಲೀ, ಪೊಲೀಸ್ ಇಲಾಖೆಯಾಗಲೀ, ಜಿಲ್ಲಾಡಳಿತವಾಗಲೀ ಅಥವಾ ಸಹಕಾರಿ ಸಂಘಗಳ ಇಲಾಖೆಗಳಾಗಲೀ ಮೌನ ವಹಿಸುತ್ತಿರುವುದು ಆಡಳಿತಾರೂಢ ಸರ್ಕಾರೀ ಅವ್ಯವಸ್ಥೆಗೆ ಹಿಡಿದ ಕನ್ನಡಿಯೆನ್ನಬೇಕೋ ಅಥವಾ ಭ್ರಷ್ಟಾಚಾರಕ್ಕೆ ಇವರು ನೀಡುತ್ತಿರುವ ಬೆಂಬಲ ಎನ್ನಬೇಕೋ ಗೊತ್ತಿಲ್ಲ. ಆದರೆ ಪಬ್ಲಿಕ್ ನೆಕ್ಸ್ಟ್ ಮಾತ್ರ ಕೊನೆ ತನಕವೂ ನ್ಯಾಯದ ಪರ ಹೋರಾಟ ಮುಂದುವರೆಸುತ್ತದೆ.

Edited By :
PublicNext

PublicNext

07/10/2022 05:44 pm

Cinque Terre

44.3 K

Cinque Terre

1