ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ನರ್ಸರಿಯಲ್ಲಿ ಕಾಣಿಸಿಕೊಂಡ ನಾಗರಹಾವು; ಸೆರೆ ಹಿಡಿದ ತಕ್ಷಣ ಇಬ್ಬರ ಮೈಮೇಲೆ ಬಂತು ನಾಗದೇವರು

ನಾಗರ ಹಾವು ಹಿಡಿಯಲು ಹೋದಾಗ ಇಬ್ಬರು ಮಹಿಳೆಯರ ಮೈಮೇಲೆ ನಾಗ ದೇವರು ಬಂದು, ನಾಗರ ಹಾವನ್ನು ಇಲ್ಲಿಯೇ ಬಿಡುವಂತೆ, ಸೂಚಿಸಿರುವ ಅಪರೂಪದ ಘಟನೆ ನಡೆದಿದೆ. ನಾಗರ ಹಾವನ್ನು ಹಿಡಿಯಬಾರದು, ಅದನ್ನು ಅಲ್ಲಿಯೆ ಬಿಡಬೇಕು ಎಂದು ಉರಗ ರಕ್ಷಕ ಸ್ನೇಕ್ ಕಿರಣ್ ಗೆ ಇಬ್ಬರು ಮಹಿಳೆಯರು ಸೂಚನೆ ನೀಡಿರುವ ಬಲು ಅಪರೂಪದ ಘಟನೆ ಇಂದು ನಡೆದಿದೆ.

ಶಿವಮೊಗ್ಗದ ಹೊನ್ನಾಳಿ ರಸ್ತೆ ಸಮೀಪದ ಫ್ಲೈಓವರ್ ಚೌಡೇಶ್ವರಿ ಕಾಲೋನಿಯಲ್ಲಿರುವ ಶಂಕರ ರೇಂಜ್ ನರ್ಸರಿಯಲ್ಲಿ ಈ ಘಟನೆ ಸಂಭವಿಸಿದೆ. ನರ್ಸರಿಯಲ್ಲಿ ಒಂದು ಅಡಿಯ ನಾಗರ ಹಾವು ಕಾಣಿಸಿಕೊಂಡಿದೆ ಎಂದು ಸ್ಥಳೀಯರೊಬ್ಬರು, ಉರಗ ರಕ್ಷಕ ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿದ್ದರು. ಈ ನರ್ಸರಿಯಲ್ಲಿ ಹಾವು ಕಾಣಿಸಿಕೊಂಡ ಜಾಗದಲ್ಲಿ ಹುಡುಕಿದಾಗ, 1 ಅಡಿ ಉದ್ದದ ನಾಗರ ಹಾವು ಸಿಕ್ಕಿದ್ದು, ಇದನ್ನು ಸ್ನೇಕ್ ಕಿರಣ್ ಹಿಡಿಯಲು ಹೋದಾಗ ಸ್ನೇಕ್ ಕಿರಣ್ ಗೆ ಅಚ್ಚರಿ ಕಾದಿತ್ತು.

ಇನ್ನೇನು ಹಾವನ್ನು ರಕ್ಷಣೆ ಮಾಡಿ, ಕಾಡಿಗೆ ಕೊಂಡೊಯ್ದು ಬಿಡಲು ತಯಾರಿ ನಡೆಸಿದ್ದ ವೇಳೆಯೇ ಇಬ್ಬರು ಮಹಿಳೆಯರ ಮೈಮೇಲೆ ನಾಗ ದೇವರು ಬಂದು, ಹಾವನ್ನು ಇಲ್ಲಿಯೇ ಬಿಡಲು ಸೂಚಿಸಿದ್ದಾರೆ. ನರ್ಸರಿಯಲ್ಲಿದ್ದ ಮಹಿಳೆಯರು ಸುತ್ತುವರಿದು ನೋಡುತ್ತಿದ್ದ ವೇಳೆ, ಮಹಿಳೆಯರ ಗುಂಪಿನಲ್ಲಿದ್ದ ವಾಸುಕಿ ಮತ್ತು ನೇತ್ರ ಎಂಬ ಮಹಿಳೆಯರ ಹಾವಭಾವ ಬದಲಾಗಿ, ಇಬ್ಬರು ಜೋರಾಗಿ ಕೂಗಿ ಕೊಂಡರಲ್ಲದೇ, ಹಾವಿನಂತೆ ವರ್ತಿಸತೊಡಗಿದ್ರು. ನೆಲಕ್ಕೆ ಬಿದ್ದು ಹೊರಳಾಡಿದ್ದಾರೆ. ಈ ವೇಳೆ, ಅಕ್ಕಪಕ್ಕದಲ್ಲಿದ್ದ ಉಳಿದ ಮಹಿಳೆಯರು ಹೆದರಿಕೊಂಡು ಓಡಿ ಹೋಗಿದ್ದಾರೆ.

ಒಮ್ಮೆಲೆ, ಮೈಮೇಲೆ ದೇವರು ಬಂದಿದ್ದನ್ನು ಕಂಡು ಸ್ನೇಕ್ ಕಿರಣ್ ಸಹಿತ ಅಲ್ಲಿದ್ದವರು ಆತಂಕಗೊಂಡಿದ್ದು, ಸ್ನೇಕ್ ಕಿರಣ್ ಹಿಡಿದಿರುವ ಹಾವನ್ನು ಎಲ್ಲೂ ಕೊಂಡೊಯ್ಯಬಾರದು. ಇಲ್ಲಿಯೇ ಬಿಡಬೇಕೆಂದು ಸೂಚನೆ ನೀಡಿದ್ದಾರೆ. ಈ ವೇಳೆ, ಆ ಮಹಿಳೆಯರು ಹೇಳಿದ ಜಾಗದಲ್ಲೇ ಸ್ನೇಕ್ ಕಿರಣ್, ನಾಗರ ಹಾವನ್ನ ಬಿಟ್ಟಿದ್ದಲ್ಲದೇ, ಮೈಮೇಲೆ ದೇವರು ಬಂದ ಮಹಿಳೆಯರಿಗೆ ಪೂಜೆ ಮಾಡಿದ್ದಾರೆ. ಇದಾದ ಬಳಿಕ ಮಹಿಳೆಯರು ಶಾಂತವಾಗಿದ್ದಾರೆ. ಈ ವೇಳೆ, ಅಲ್ಲಿದ್ದ ಸ್ನೇಕ್ ಕಿರಣ್ ಸೇರಿದಂತೆ, ಮಹಿಳೆಯರು, ಜನರು ಕೆಲಕಾಲ ಆತಂಕಗೊಂಡಿದ್ದಂತೂ ಸತ್ಯ.

ಮೋಹನ್ ಕೃಷ್ಣ, ಪಬ್ಲಿಕ್ ನೆಕ್ಸ್ಟ್, ಶಿವಮೊಗ್ಗ

Edited By :
PublicNext

PublicNext

30/09/2022 08:42 pm

Cinque Terre

108.52 K

Cinque Terre

8