ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪೋಷಕರ ಬಾಯಿ ಚಪ್ಪರಿಸಿ ತಿನ್ನು ಬಂಬು(ಪಾಪಡಿ)ಪ್ಯಾಕ್ಟರಿ ಹೇಂಗ್ ಐತಿ ನೋಡ್ರಿ; ಆಮ್ಯಾಲ್ ಮಕ್ಕಳಿಗೆ ಕೊಡಿಸೋ ವಿಚಾರ ಮಾಡ್ರಿ.

ನಮ್ಮ ಹುಬ್ಬಳ್ಳ್ಯಾಗ ಮತ್ತ ಅದರ ಸುತ್ತಮುತ್ತ ಹಳ್ಳ್ಯಾಗ ಸಣ್ಣ ಮಕ್ಕಳು ಯಜ್ಜಾ ಒಂದ್ಯಾಡ್ ರೂಪಾಯಿ ಕೊಡ ಬಂಬು ತಿಂದ ಬರ್ತೀನಿ ಅಂತಾ ಹೇಳಿ ಅಜ್ಜನ್ನ,ಅಪ್ಪನ ಕಾಡಿಬೇಡಿ ಬಂಬು ತಿಂದ ಖುಷಿ ಪಡ್ತಾವ,ಆದ್ರ ಅಂತಾ ಬಂಬು(ಪಾಪಡಿ) ತಯಾರಾಗು ಜಾಗಾಕ್ ನೀವು ಒಂದ್ಸರಿ ಹೋಗ ಬರ್ರಿ ಸರ್,ಈ ಪ್ಯಾಕ್ಟರಿಯವರು ಮಕ್ಕಳ ಆರೋಗ್ಯದ ಜತಿ ಆಟಾ ಆಡಾ ಕುಂತಾರಿ ಅಂತ ನಿಮ್ಮ ಪಬ್ಲಿಕ್ ನೆಕ್ಸ್ಟ್ ಗೆ ಮಾಹಿತಿ ಕೊಟ್ಟಿದ್ರಿ,ನಾವು ಆಯಿತ ತಡಿ ಒಂದ್ಸಲಾ ಪ್ಯಾಕ್ಟರಿ ಹೇಂಗ್ ಐತಿ ಅಂತಾ ಅದಕ್ಕ ಸಂಬಂಧಪಟ್ಟ ಸಾಹೇಬರನ್ನ ಕರಕೊಂಡು ಹೊದಿವಿ ನೋಡಿದಾಗ ನಮಗ ಗಾಬ್ರಿ ಆತ ನೋಡ್ರಿ..ಅಷ್ಟಕ್ಕೂ ಎಲ್ಲಿದಪಾ ಈ ಪ್ಯಾಕ್ಟರಿ ಅಂತೀರ ಏನ್ರೀ

ಇಲ್ಲೇ ನಮ್ಮ ಪುಣಾ-ಬೆಂಗಳೂರು ಹೈವೇ ಬಾಜುಕ್ ಕೋಟಗುಣಸಿ ಕಡೆ ಈ ಟಾಮ್ ಆಂಡ್ ಜರ್ರಿ ಅಂತಾ ಬಂಬು ಪ್ಯಾಕ್ಟರಿ ಐತ್ರಿ,ನಾವು ಒಳಗ ಹೋಗಿ ನೋಡಿದಾಗ ಹೀಂಗ ಕಡಾಯಿದಾಗ ಇರು ಎನ್ನಿ ನೋಡಿದ್ರ ಇದೇನೋ ಗಾಡ್ಯಾಗಿನ ಸುಟ್ಟ ಆಯಿಲ್ ತೋರಿಸಾಕ್ ಕುಂತೀರಿ ಅನ್ಕೊಂಡಿದ್ವಿ ಆದ್ರ,ಇದು ಸುಟ್ಟ ಆಯಿಲ್ ಅಲ್ಲಾ ನಮ್ಮ ಮಕ್ಕಳ ಬಾಯಿ ಚಪ್ಪರಿಸಿ ತಿಂತಾರ ಅಲ್ಲ ಬಂಬು(ಪಾಪಡಿ) ತಯಾರ ಮಾಡು ಎಣ್ಣಿ ಅಂತಾ ಗೊತ್ತಾತರಿ, ಹಂಗ ಸ್ವಲ್ಪ ಮುಂದ ಹೋದ್ರ ಬಕೀಟ್ ನ್ಯಾಗ್ ನೀರು ನೋಡಿ ಇವೆನೋ ಮಾರಾಯ ಗಟರ್ ನೀರ ಇಲ್ಲ್ಯಾಕ್ ಇಟ್ಟಿರಿ ಅಂದ್ರ ಕೇಳಿದ್ರ,ಅವು ಬಂಬು ತಯಾರ ಮಾಡಾಕ ಬಳಸು ನೀರ ಅನ್ನುದ ಗೊತ್ತಾತರೀ,ಅಷ್ಟ ಅಲ್ಲದ ಪ್ಯಾಕ್ಟರಿ ವಿಡಿಯೋ ಮಾಡುವಾಗ ನಿಮ್ಮ ವಿಡಿಯೋ ಮಾಡ್ತೀವಿ ಅಂತಾ ನಮಗ ಹೆದರಿಕಿ ಹಾಕು ನಾಟಕ ಮಾಡಿದ್ರಿ.

ಇನ್ನ ಇಲ್ಲಿ ಕೆಲ್ಸಾ ಮಾಡು ಮಂದಿವ ಒಬ್ಬರುವ ಹೆಲ್ತ್ ರಿಪೋರ್ಟ್ ಕೇಳಿದ್ರ ಹೆಲ್ತ್ ರಿಪೋರ್ಟ್ ಅಂದ್ರ ಎನ್ ಅಂತಾ ನಮ್ಮನ್ನ ಕೇಳ್ತಾರ ರೀ, ಹಿಂದ 2 ವರ್ಷದ ಹಿಂದ ಇದ ಪ್ಯಾಕ್ಟರಿನ ಡಿಸಿ ದೀಪಾ ಚೋಳನ್ ಮೇಡಂ 11 ತಿಂಗಳ ಬಂದ್ ಮಾಡಿಸಿದ್ದರ ಅಂತರಿ,ಆಮ್ಯಾಲ್ ಡಿಸಿ ಮೇಡಂ ಹೋದ ಮ್ಯಾಲ್ ಅವರ ಇವರ ಕಾಲ ಬಿದ್ದ ಪ್ಯಾಕ್ಟರಿ ಮಾಲಕ್ ಮತ್ತ ತನ್ನ ಹಳೆ ಚಾಳಿ ಮುಂದುವರೆಸ್ಯಾನ್ ನೋಡ್ರಿ.ಇದರ ಪ್ಯಾಕ್ಟರಿ ಬಗ್ಗೆ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿನ ನಮ್ಮ ರಿಪೋರ್ಟರ್ ಮಾತಾಡಿಸಿದಾಗ ಅವರ ಹೇಳಿದ್ರ ಅಂತಾ ನೋಡ್ರಲ್ಲ..

ನೋಡ್ರಿಪಾ ನಾವ ಅಂತೂ ಬಂಬು ತಯಾರಾಗು ಪ್ಯಾಕ್ಟರಿ ಹೇಂಗ್ ಐತಿ ಅಂತಾ ನಿಮಗ ತೋರಿಸೇವರಿ, ಇನ್ನ ಮ್ಯಾಗ ಮಕ್ಕಳ ಯಪ್ಪಾ,ಯಜ್ಜಾ,ಬಂಬು ತಿನ್ನಾಕ ರೊಕ್ಕಾ ಕೇಳಿದ್ರ,ನಿಮ್ಮ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ನಿಮಗ ಇದ್ರ ಬಾಜುಕ್ ಒಂದ ಬಡಕಿ ಹಿಡ್ಕೊಂಡು ಈ ವಿಡಿಯೋ ತೋರಿಸರಿ,ಆಮ್ಯಾಗ ಬಂಬು ಬೇಕೋ ಬಡಿಗೆ ಬೇಕೋ ಅಂತ ಕೇಳ್ರಿ,ಇನ್ನ ಮಕ್ಕಳ ತಿನ್ನು ಬಂಬು ಈ ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸಾಹೇಬರ ಹೀಂಗ ಮಕ್ಕಳ ಜೀವದ ಜೊತಿ ಆಟಾ ಆಡು ಇಂತಹ ಪ್ಯಾಕ್ಟರಿ ಮ್ಯಾಲ್ ಏನ ಕ್ರಮ ಕೈಗೊಳ್ತೀರಿ ನೋಡ್ರಿ.

Edited By :
PublicNext

PublicNext

29/09/2022 08:38 pm

Cinque Terre

132.96 K

Cinque Terre

15