ಬೆಂಗಳೂರು: ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿದ್ದ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಹಿರಿಯ ಧುರೀಣ ದಿಗ್ವಿಜಯ ಸಿಂಗ್, ಶಶಿ ತರೂರ್, ಕೆ.ಎನ್ ತ್ರಿಪಾಠಿ ಇದ್ದರು. ಕೊನೆಗೆ ಖರ್ಗೆ ಅವರು ಕಣದಲ್ಲಿ ಉಳಿದಿದ್ದಾರೆ.
ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮಲ್ಲಿಕಾರ್ಜುನ್ ಖರ್ಗೆ, ನನಗೆ ಪಕ್ಷದ ಹಿರಿಯ ನಾಯಕರು, ಕಾರ್ಯಕರ್ತರು ಬೆಂಬಲಿಸಿದ್ದಾರೆ. ಇವರೆಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.
17ಕ್ಕೆ ಮತದಾನ ಇದೆ. 19ಕ್ಕೆ ಫಲಿತಾಂಶ ಬರಲಿದೆ. ಅಲ್ಲಿಯವರೆಗೂ ಹೆಚ್ಚು ಮಾತಾಡೋದಿಲ್ಲ. ನಾನು ಬಾಲ್ಯದಿಂದಲೂ ಕಾಂಗ್ರೆಸ್ ಸಿದ್ಧಾಂತಕ್ಕೆ ಒಗ್ಗಿಕೊಂಡಿದ್ದೇನೆ. ಇಂದಿರಾಗಾಂಧಿ ಅವರು ಕಲಬುರಗಿಗೆ ಬಂದಾಗ ನಮಗೆ ಸ್ಫೂರ್ತಿ ತುಂಬಿದ್ದರು. ಸದಾ ಕಾಲ ಹೋರಾಟ ಮಾಡಿಕೊಂಡೇ ಬಂದಿದ್ದೇನೆ. ಈಗಲೂ, ಇನ್ಮುಂದೆಯೂ ಕಾಂಗ್ರೆಸ್‌ನಲ್ಲೇ ಇರುತ್ತೇನೆ ಎಂದಿದ್ದಾರೆ.
PublicNext
30/09/2022 09:23 pm