ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆರ್‌ಎಸ್‌ಎಸ್ ದೇಶಭಕ್ತರನ್ನು ತಯಾರಿಸುವ ಕಾರ್ಕಾನೆ: ಯತ್ನಾಳ್

ವಿಜಯಪುರ: ಕೇಂದ್ರ ಸರ್ಕಾರ ಹೇರಿರುವ ಪಿಎಫ್ಐ ನಿಷೇಧವನ್ನು ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ವಾಗತಿಸಿದ್ದಾರೆ. ಆರ್‌ಎಸ್‌ಎಸ್ ಬ್ಯಾನ್ ಮಾಡಬೇಕೆನ್ನುವುದು ಅತಿರೇಕದ ಮಾತು, ಯಾಕೆಂದರೆ ಅದು ದೇಶಭಕ್ತರನ್ನು ತಯಾರು ಮಾಡುವ ಕಾರ್ಖಾನೆಯಾಗಿದೆ. ಎಂದು ಯತ್ನಾಳ್ ಹೇಳಿದರು.

ಭಯೋತ್ಪಾದಕ ಹಾಗೂ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗುವ ಪಿಎಫ್‌ಐ ಸಂಘಟನೆ ನಿಷೇಧ ಮಾಡಬೇಕೆನ್ನವುದು ನಮ್ಮೆಲ್ಲರ ಆಸೆಯಾಗಿತ್ತು. ಅಂತೆಯೇ ಕೇಂದ್ರ ಸರ್ಕಾರ ಪಿಎಫ್ಐ ಬ್ಯಾನ್ ಮಾಡಿದೆ. ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಎಂದು ಯತ್ನಾಳ್ ಹೇಳಿದ್ದಾರೆ.

ಇಡೀ ದೇಶದ ಇತಿಹಾಸದಲ್ಲಿ ಒಂದೇ ರಾತ್ರಿ 200 ಕಡೆಗಳಲ್ಲಿ ದಾಳಿ ಮಾಡಿದಾಗ ವಿದೇಶಿ ಹಣದ ದಾಖಲೆ ಸಿಕ್ಕಿವೆ. ಎರಡು ಸಂಘಟನೆಗಳನ್ನು ಬ್ಯಾನ್ ಮಾಡಬೇಕು ಅನ್ನೋದು ದೇಶಭಕ್ತರ ಆಗ್ರಹವಿದೆ. ಪ್ರಧಾನಿ, ಗೃಹಮಂತ್ರಿಗಳು ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ. ನಿಶ್ಚಿತವಾಗಿ ಶೀಘ್ರದಲ್ಲೇ ಪಿಎಫ್‍ಐ, ಎಸ್‍ಡಿಪಿಐ ಸಂಘಟನೆಗಳು ಬ್ಯಾನ್ ಆಗುತ್ತವೆ ಅನ್ನೋ ವಿಶ್ವಾಸವಿದೆ ಎಂದು ಯತ್ನಾಳ್ ಇದಕ್ಕೂ ಮುನ್ನ ಹೇಳಿದ್ದರು.

Edited By : Nagaraj Tulugeri
PublicNext

PublicNext

28/09/2022 05:06 pm

Cinque Terre

31.3 K

Cinque Terre

5

ಸಂಬಂಧಿತ ಸುದ್ದಿ