ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ಹಾಡೊಂದನ್ನು ಬಿಡುಗಡೆ ಮಾಡಿದೆ. ‘ಕಮಿಷನ್,ಕಾಸು ಬಿಜೆಪಿಯ ಮನೆ ದೇವ್ರು’ ಎಂದು ಹಾಡಿನ ಮೂಲಕ ಸರ್ಕಾರವನ್ನು ಟೀಕಿಸಿದೆ.
ಭ್ರಷ್ಟಾಚಾರ ಎಂಬ ವಿಡಂಬನಾತ್ಮಕ ವಿಡಿಯೋ ಸಾಂಗ್ ನ್ನು ಕಾಂಗ್ರೆಸ್ ಟ್ವೀಟರ್ ನಲ್ಲಿ ಹಂಚಿಕೊಂಡಿದೆ. ‘ರಾಜ್ಯ ಆಳ್ತಿರೋ 40% ಸರ್ಕಾರ,ನಾಡಿನ ಜನರ ಸಂಕಷ್ಟಕ್ಕೆ ಕಾರಣ. ಬಿಜೆಪಿ ಅಂದ್ರೆ ಭ್ರಷ್ಟಾಚಾರದ ಅಕ್ಷಯ ಪಾತ್ರೆ’ ಎಂದು ಬರೆದುಕೊಂಡಿದೆ. ಈ ಹಾಡಿನಲ್ಲಿ ಪಿಎಸ್ ಐ ಹಗರಣ, ಬಿಟ್ ಕಾಯಿನ್, ಕೋವಿಡ್ ಫಂಡ್ ಸೇರಿ ಹಲವು ಪ್ರಕರಣಗಳ ಬಗ್ಗೆ ಉಲ್ಲೇಖಿಸಲಾಗಿದೆ.
ಭ್ರಷ್ಟಾಚಾರ ಭ್ರಷ್ಟಾಚಾರ ಕಮಿಷನ್ನೇ ಬಿಜೆಪಿಗೆ ಆಹಾರ ಸಾಂಗ್ ರಿಲೀಸ್ ಆದಾಗಿನಿಂದ ಭಾರೀ ವೈರಲ್ ಆಗುತ್ತಿದೆ. ಮತ್ತೊಂದೆಡೆ ಬ್ಯಾನರ್ ನಲ್ಲಿ 200 ರೂ. ನೋಟ್ ಪ್ರಿಂಟ್ ಮಾಡಿದ ಕಾಂಗ್ರೆಸ್, 200 ರೂ. ನೋಟಿನಲ್ಲಿ ಭ್ರಷ್ಟ ಜನತಾ ಪಕ್ಷ ಅಂದ್ರೆ ಭ್ರಷ್ಟಾಚಾರ, 40% ಕಮಿಷನ್ ಸರ್ಕಾರ, ಹೆಚ್ಚಿನ ಮಾಹಿತಿಗಾಗಿ 8447704040 ಈ ನಂಬರ್ ಗೆ ಕರೆ ಮಾಡಿ ಎಂದು ಹೆಲ್ಪ್ ಲೈನ್ ಸಂಖ್ಯೆ ಮುದ್ರಣ ಮಾಡಲಾಗಿದೆ.
PublicNext
13/09/2022 09:14 pm