ಕುಣಿಗಲ್ : 2023 ರ ಚುನಾವಣೆಯ ಕಾವು ಹೆಚ್ಚುತ್ತಿರುವ ಬೆನ್ನಲ್ಲೆಯೇ ದೊಡ್ಡಗೌಡರ ಮೊಮ್ಮಗ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅಪ್ಪ, ತಾತನಂತೆ ಹೇಳಿಕೆ ಕೊಟ್ಟು ಅಚ್ಚರಿ ಮೂಡಿಸಿದ್ದಾರೆ.
ಅಷ್ಟಕ್ಕೂ ನಿಖಿಲ್ ಕೊಟ್ಟ ಅಚ್ಚರಿ ಹೇಳಿಕೆ ಏನು ಅಂದ್ರೆ ಮುಂಬರುವ ವಿಧಾನಸಭಾ ಚುನಾವಣೆ ಜೆ ಡಿ ಎಸ್ ಗೆ ಒಂದು ರೀತಿಯಲ್ಲಿ ಕೊನೆ ಚುನಾವಣೆ ಎಂದಿದ್ದಾರೆ. ಕುಣಿಗಲ್ ತಾಲೂಕಿನ ಹುತ್ರಿದುರ್ಗ ಹೋಬಳಿಯ ಅಂಚೆಪಾಳ್ಯ ಕ್ರಾಸ್ ನಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ನಿಖಿಲ್, ಇದು ಕಷ್ಟಗಳು ಕಳೆಯುವಂತಹ ಚುನಾವಣೆಯಾಗಬೇಕು.
2023ರ ಚುನಾವಣೆ ಒಂದು ರೀತಿ ನಮ್ಮ ಪಾಲಿಗೆ ಕೊನೆಯ ಚುನಾವಣೆ. ಇಲ್ಲಿಂದ ಹೊಸ ಅಧ್ಯಾಯ ಆರಂಭವಾಗಲಿದೆ. ಮುಂದಿನ 25 ವರ್ಷಗಳ ಕಾಲ ನಮ್ಮದೇ ಪಾರುಪತ್ಯ ಇರುತ್ತದೆ. ದೇವೇಗೌಡರು ಕಳೆದ ಎರಡು ಮೂರು ತಿಂಗಳಿಂದ ಅನಾರೋಗ್ಯದ ಕಾರಣಕ್ಕೆ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇದೀಗ ಅವರ ಆರೋಗ್ಯ ಸುಧಾರಿಸಿದ್ದು,ಕುಮಾರಸ್ವಾಮಿಯವರನ್ನು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಬೇಕು. ಆ ನಿಟ್ಟಿನಲ್ಲಿ ಪಕ್ಷ ಸಂಘಟನೆ ಕಾರ್ಯಕರ್ತರು ಶ್ರಮಿಸಬೇಕು. ಎಂದು ಹೇಳಿದರು.
ಇದೇ ಹೇಳಿಕೆಯನ್ನು ಹಲವು ಚುನಾವಣೆಯಲ್ಲಿ ಕುಮಾರಸ್ವಾಮಿ, ದೇವೇಗೌಡರು ಹೇಳಿರುವ ಉದಾಹರಣೆ ಇವೆ.
PublicNext
11/09/2022 09:47 pm