ಬೆಂಗಳೂರು: ರಾಜ್ಯದಲ್ಲಿ ವರುಣನ ಅಬ್ಬರ ಜೋರಾಗಿದ್ದು, ಬೆಂಗಳೂರು ಸೇರಿದಂತೆ ಅನೇಕ ಜಿಲ್ಲೆಗಳಿಗೆ ಪ್ರವಾಹದ ಬಿಸಿ ತಟ್ಟಿದೆ. ಈ ಮಧ್ಯೆ ರಾಜ್ಯ ಸರ್ಕಾರವು ಜನರ ನೆರವೇಗಿ ನಿಲ್ಲದೆ ಜನಸ್ಪಂದನಾ ಕಾರ್ಯಕ್ರಮ ನಡೆಸಿದೆ. ಅದರಲ್ಲೂ ಈ ಕಾರ್ಯಕ್ರಮದ ವೇದಿಕೆ ಮೇಲೆ ಸಚಿವರು ಹಾಗೂ ಶಾಸಕರು ಕುಣಿದು ಕುಪ್ಪಳಿಸಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಹೌದು. ದೊಡ್ಡಬಳ್ಳಾಪುರದಲ್ಲಿ ನಡೆದ ಬಿಜೆಪಿಯ ಜನಸ್ಪಂದನ ಕಾರ್ಯಕ್ರಮದಲ್ಲಿ 'ಕುಲದಲ್ಲಿ ಮೇಲ್ಯಾವುದೋ....' ಹಾಡಿಗೆ ವೇದಿಕೆ ಮೇಲೆ ಸಚಿವ ಎಂಟಿಬಿ ನಾಗರಾಜ್, ಎಸ್.ಆರ್. ವಿಶ್ವನಾಥ್ ಸೇರಿದಂತೆ ಕೆಲವು ಶಾಸಕರು ಡಾನ್ಸ್ ಮಾಡಿದ್ದಾರೆ.
ಕಾರ್ಯಕ್ರಮ ಆರಂಭಕ್ಕೂ ಮುನ್ನ ವೇದಿಕೆಯಲ್ಲಿ ವಿಜಯಪ್ರಕಾಶ್ ಅವರ ಗಾಯನ ಕಾರ್ಯಕ್ರಮ ನಡೆಯಿತು. ಅದರಂತೆ ಕುಲದಲ್ಲಿ ಮೇಲ್ಯಾವುದೋ ಎಂಬ ಹಾಡು ಹಾಡುತ್ತಿದ್ದಾಗ ಸಚಿವ ಎಂಟಿಬಿ ನಾಗರಾಜ್, ಎಸ್.ಆರ್. ವಿಶ್ವನಾಥ್ ಸ್ಟೆಪ್ ಹಾಕಿದ್ದಾರೆ. ನಾಯಕರ ಈ ನಡೆಗೆ ರಾಜ್ಯದ ಜನ ಕಿಡಿಕಾರಿದ್ದಾರೆ. ರಾಜ್ಯವು ಪ್ರವಾಹಕ್ಕೆ ತತ್ತರಿಸಿ ಹೋಗುತ್ತಿದೆ. ಇಂತಹ ಸಮಯದಲ್ಲಿ ನೆರವಿಗೆ ಬರದೆ ಇವರು ಕುಣಿದು ಕುಪ್ಪಳಿಸುತ್ತಿದ್ದಾರೆ. ಇವರು ಮಾನವೀಯತೆ ಮರೆತವರು ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
PublicNext
10/09/2022 09:19 pm