ಬೆಳಗಾವಿ: ಸ್ವರ್ಗೀಯ ಉಮೇಶ್ ಕತ್ತಿ ಅವರ ಅಕಾಲಿಕ ಮರಣ ವೈಯಕ್ತಿಕವಾಗಿ ಸರ್ಕಾರಕ್ಕೆ ಇಡೀ ನಾಡಿಗೆ ತುಂಬಲಾರದ ನಷ್ಟ ಬೆಳಗಾವಿಯಲ್ಲಿ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಸಂತಾಪ ವ್ಯಕ್ತಪಡಿಸಿದರು. ಅವರ ಸಾವಿನ ಬಗ್ಗೆ ಮಾತ್ನಾಡಿದ ಅವರು, ಕತ್ತಿಯವರಿಗೆ ಎದೆನೋವು ಉಂಟಾಗಿ ಆಸ್ಪತ್ರೆಗೆ ದಾಖಲಾದಾಗ ಮೊದಲ ಕಾಲ್ ನನಗೆ ಬಂತೂ.ನನಗೆ ಗೊತ್ತಾದ ಏಳೆಂಟು ನಿಮಿಷಕ್ಕೆ ಆಸ್ಪತ್ರೆಗೆ ಹೋಗಿದ್ದೆ.ಹಿರಿಯ ಹೃದಯ ತಜ್ಞರು ಕೂಡ ಅಲ್ಲಿಗೆ ಬರಮಾಡಿಕೊಂಡು. ಒಂದೂವರೆ ಎರಡು ಗಂಟೆಗಳ ಕಾಲ ಸತತ ಪ್ರಯತ್ನ ಮಾಡಿದೇವು ಆದೇ.
ವಿಧಿಯಾಟ ನಮ್ಮೆಲ್ಲ ಪ್ರಯತ್ನ ಯಶಸ್ವಿಯಾಗಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಆದರೆ ಅವರ ಕನಸು ಕಂಡ ದೂರದೃಷ್ಟಿ ಯೋಜನೆಗಳನ್ನ ನಮ್ಮ ಸರ್ಕಾರ ಮುಂದುವರೆಸಿಕೊಂಡು ಹೋಗುತ್ತೆ. ಎಲ್ಲರೊಟ್ಟಿಗೆ ಬಂದೂ ಬೆಲ್ಲದ ಬಾಗೇವಾಡಿಗೆ ಹೋಗಿ ಅವರ ಕುಟುಂಬಕ್ಕೆ ಸಾಂತ್ವನ ಹೇಳತ್ತೆವೆ. ಅವರ ಸಮಾಧಿಗೆ ಪೂಜೆ ಮಾಡಲು ನಾವೆಲ್ಲ ಬಂದಿದ್ದೇವೆ. ಬೃಂದಾವನ ಮಾದರಿಯಲ್ಲಿ ಹಿಡಕಲ್ ಜಲಾಶಯ ಮಾಡಬೇಕೆಂಬ ಕೊನೆಯ ಆಸೆ ವಿಚಾರ. ಮುಖ್ಯಮಂತ್ರಿಗಳು ಖಂಡಿತವಾಗಿ ಅವರ ಆಸೆಗಳನ್ನ ಈಡೇರಿಸುತ್ತಾರೆ.ನಾನು ಕೂಡ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇವೆ ಎಂದು ಹೇಳಿದರು.
PublicNext
08/09/2022 01:12 pm