ಮುಂಬೈ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬೆಂಗಾವಲು ಪಡೆ ಸಾಗಲು ಆಂಬ್ಯುಲೆನ್ಸ್ ಕಾಯುವಂತೆ ಮಾಡಲಾಯಿತು ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರಿ ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಸದ್ಯ ಮುಂಬೈ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
"ಆಂಬ್ಯುಲೆನ್ಸ್‌ನಲ್ಲಿ ಯಾವುದೇ ತುರ್ತು ರೋಗಿ ಇರಲಿಲ್ಲ ಎಂದು ಪರಿಶೀಲಿಸಲಾಗಿದೆ ಮತ್ತು ದೋಷದಿಂದಾಗಿ ಆಂಬ್ಯುಲೆನ್ಸ್ ವ್ಯಾನ್ ಚಾಲಕನಿಗೆ ಸೈರನ್ ಸ್ವಿಚ್ ಆಫ್ ಮಾಡಲು ಸಾಧ್ಯವಾಗಲಿಲ್ಲ" ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
PublicNext
07/09/2022 07:39 pm