ಮೈಸೂರು : ಬೆಂಗಳೂರಿನ ಆಳುವ ದೊರೆಗಳ ಗಮನ ಸೆಳೆಯಲು ಈ ರೀತಿಯ ಹೇಳಿಕೆ ನೀಡುತ್ತಿದ್ದರು. ಅವರಿಗೆ ಚಾಟಿ ಏಟು ನೀಡಲು ಈ ರೀತಿ ಹೇಳುತ್ತಿದ್ದರು. ನಾವು ಅರ್ಥ ಮಾಡಿಕೊಳ್ಳುತ್ತಿರಲಿಲ್ಲ ಅಷ್ಟೇ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಸಚಿವ ಉಮೇಶ್ ಕತ್ತಿ ನಿಧನ ಹಿನ್ನೆಲೆಯಲ್ಲಿ ಅವರ ಆತ್ಮಕ್ಕೆ ಶಾಂತಿ ನೀಡುವಂತೆ ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉಮೇಶ್ ಕತ್ತಿ ನೇರ ನುಡಿಯ ರಾಜಕಾರಣಿ. ಅವರ ಅಗಲಿಕೆಯಿಂದ ಉತ್ತರ ಕರ್ನಾಟಕದ ದೊಡ್ಡ ಧ್ವನಿ ಹುದುಗಿ ಹೋಗಿದೆ. ಪ್ರತ್ಯೇಕ ರಾಜ್ಯ ಹೇಳಿಕೆ, ವಿಭಜನೆಯ ಪರ ಅಂತಾ ವಿವಾದವಾಗಿತ್ತು. ಅಭಿವೃದ್ದಿ ವಿಚಾರವಾಗಿ ಅವರು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಧ್ವನಿ ಎತ್ತಿದ್ದರು ಎಂದರು.
ಬೆಂಗಳೂರಿನ ಆಳುವ ದೊರೆಗಳ ಗಮನ ಸೆಳೆಯಲು ಈ ರೀತಿಯ ಹೇಳಿಕೆ ನೀಡುತ್ತಿದ್ದರು. ಅವರಿಗೆ ಚಾಟಿ ಏಟು ನೀಡಲು ಈ ರೀತಿ ಹೇಳುತ್ತಿದ್ದರು. ನಾವು ಅರ್ಥ ಮಾಡಿಕೊಳ್ಳುತ್ತಿರಲಿಲ್ಲ ಅಷ್ಟೇ. ಕತ್ತಿ ಉತ್ತರ ಕರ್ನಾಟಕದ ಏಳಿಗೆ ಬಯಸುತ್ತಿದ್ದ ನಾಯಕ. ಅವರ ರೀತಿ ನೇರವಾಗಿ ಹೇಳುವ ನಾಯಕ ಮತ್ತೊಬ್ಬ ಸಿಗುವುದಿಲ್ಲ. ಅವರು ಅಭಿವೃದ್ದಿ ವಿಚಾರವಾಗಿ ಯಾರ ಮುಲಾಜಿಗೂ ಒಳಗಾಗದೆ ತರಾಟೆಗೆ ತೆಗೆದುಕೊಳ್ಳುತ್ತಿದ್ದರು ಎಂದು ಹೇಳಿದರು.
ಉತ್ತರ ಕರ್ನಾಟಕ ಪ್ರಬಲ ಪ್ರತಿಪಾದಕನನ್ನು ಕಳೆದುಕೊಂಡಿದೆ. ಅವರ ಅಭಿವೃದ್ಧಿ ಕನಸಿನ ಕಡೆ ಎಲ್ಲಾ ರಾಜಕಾರಣಿಗಳು ಹೆಚ್ಚಿನ ಗಮನ ಕೊಡಬೇಕು. ಈ ಮೂಲಕ ಅರ್ಥಪೂರ್ಣ ಶ್ರದ್ಧಾಂಜಲಿ ಸಲ್ಲಿಸಬೇಕು ಎಂದು ಸಂಸದರು ತಿಳಿಸಿದರು.
PublicNext
07/09/2022 04:46 pm