ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನ: ಸಿದ್ದರಾಮಯ್ಯ ಜೊತೆ ಸೆಲ್ಫಿಗೆ ಮುಗಿಬಿದ್ದ ಅಭಿಮಾನಿಗಳು

ಹಾಸನ: ಹಾಸನದಲ್ಲಿ ಸಿದ್ದು ಅಭಿಮಾನಿಗಳು ಸೆಲ್ಫಿಗಾಗಿ ಮುಗಿ ಬಿದ್ದಿದ್ದಾರೆ. ತಮ್ಮ ನೆಚ್ಚಿನ ನಾಯಕನ ಜೊತೆ ಫೋಟೊ ಕ್ಲಿಕ್ಕಿಸಿಕೊಳ್ಳಲು ಮಹಿಳೆಯರೂ ಪರದಾಡಿದರು.

ನೂಕುನುಗ್ಗಲಿನ ನಡುವೆ ಪ್ರಯಾಸ ಪಟ್ಟು ಕೊನೆಗೂ ಜನರು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಇನ್ನು ಈ ಘಟನೆ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಗೊಲ್ಲರಹೊಸಳ್ಳಿ ಗ್ರಾಮದಲ್ಲಿ ನಡೆದಿದೆ. ತಮ್ಮ ಆಪ್ತ ಪಟೇಲ್ ಶಿವಪ್ಪ ಮಗನ ಬೀಗರೂಟಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಬಂದಿದ್ರು.

ಊಟ ಮುಗಿಸಿ ಹೊರ ಹೋಗುವಾಗ ಜನರು ಸೆಲ್ಫಿಗಾಗಿ ಮುಗಿ ಬಿದ್ದಿದ್ದಾರೆ. ಕೈಯಲ್ಲಿ ಮೊಬೈಲ್‌ ಹಿಡಿದು ಸಿದ್ದರಾಮಯ್ಯ ರತ್ತ ಜನರ ಗುಂಪು ನುಗ್ಗಿ ಬಂದಿದೆ. ಜನರನ್ನು ನಿಯಂತ್ರಿಸಲು ಪೊಲೀಸರೂ ಹರಸಾಹಸ ಪಟ್ಟಿದ್ದಾರೆ. ಜನಸಂದಣಿ ನಡುವೆ ಎಲ್ಲರ ಜೊತೆಗೂ ಸಿದ್ದರಾಮಯ್ಯ ಸೆಲ್ಫಿಗೆ ಫೋಸ್ ಕೊಟ್ಟು ಹೊರಟರು.

Edited By :
PublicNext

PublicNext

04/09/2022 08:46 pm

Cinque Terre

103.62 K

Cinque Terre

3

ಸಂಬಂಧಿತ ಸುದ್ದಿ