ಮಂಗಳೂರು: ಮಂಗಳೂರು ಪ್ರವಾಸದಲ್ಲಿರುವ ಪ್ರಧಾನಿ ಮೋದಿಯವರಿಗೆ ಅದ್ಧೂರಿಯಾಗಿ ಸ್ವಾಗತ ಕೊರಲಾಯಿತು.ಇತ್ತ ಪ್ರಧಾನಿಗಳ ಕಾರ್ಯಕ್ರಮಕ್ಕೆ 1 ಲಕ್ಷಕ್ಕೂ ಅಧಿಕ ಮಂದಿ ಆಗಮಿಸಿದ್ದರು.ನಗರದ ಗೋಲ್ಡ್ ಫಿಂಚ್ ಸಿಟಿ ಮೈದಾನಕ್ಕೆ ಆಗಮಿಸಿದರು. ಮೋದಿ ಅವರನ್ನ ಸ್ವಾಗತಿಸಲು ಸರತಿ ಸಾಲಿನಲ್ಲಿ ರಾಜ್ಯ ನಾಯಕರು ನಿಂತಿದ್ದರೆ, ಅತ್ತ ಮೋದಿ ಅವರನ್ನ ನೋಡಲು ವೇದಿಕೆ ಹಿಂಭಾಗದಲ್ಲಿ ಗುಂಪು ಗುಂಪಾಗಿ ಅಭಿಮಾನಿಗಳು ಕಾಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ನಗರದ ಗೋಲ್ಡ್ ಫಿಂಚ್ ಸಿಟಿಯಲ್ಲಿ ಹಮ್ಮಿಕೊಂಡಿರುವ ವೇದಿಕೆ ಕಾರ್ಯಕಮಕ್ಕೆ ಆಗಮಿಸಿದ ಪ್ರಧಾನಿ ಅವರಿಗೆ ಈ ಭಾಗದ ವಿಶೇಷ ಮಲ್ಲಿಗೆ ಹಾರ ಹಾಕಿ, ಮಡಿಕೇರಿ ಪೇಟ ತೊಡಿಸಲಾಯಿತು. ಪರಶುರಾಮ ವಿಗ್ರಹವನ್ನು ಸುನೀಲ್ ಕುಮಾರ್ ನೀಡಿದರು. ಸಿಎಂ ಬಸವರಾಜಬೊಮ್ಮಾಯಿ ಅವರು ಹಸಿರು ಶಾಲು ಹೊದಿಸಿ ನಮಸ್ಕರಿಸಿದರು.
ನವಮಂಗಳೂರು ಬಂದರು, ಎಂಆರ್ಪಿಎಲ್, ಮೀನುಗಾರಿಕಾ ಬಂದರು ಸಹಿತ 3,800 ಕೋಟಿ ರೂ. ವೆಚ್ಚದ ಯೋಜನೆಗಳ ಶಿಲಾನ್ಯಾಸ-ಉದ್ಘಾಟನೆ ಕಾರ್ಯಕ್ರಮಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಾಕ್ಷಿಯಾಗಿದ್ದಾರೆ.
PublicNext
02/09/2022 03:47 pm