ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಂಗ್ರೆಸ್ ಜೋಡೋ ಯಾತ್ರೆ ! ಪ್ರತಿ ಶಾಸಕರಿಗೆ 5 ಸಾವಿರ ಜನ ಸೇರಿಸುವ ಗುರಿ

ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಗೆ ಭರದ ಸಿದ್ದತೆ ನಡೆಸುತ್ತಿದ್ದು 117 ಮಂದಿ ಕಾಂಗ್ರೆಸ್ ನಾಯಕರ ಪೈಕಿ 9 ಮಂದಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ರಾಜಸ್ತಾನದಿಂದ ಯಾತ್ರೆ ಪ್ರಾರಂಭಿಸಲಿದ್ದು ಭಾರತ್ ಜೋಡೋ ಪಾದಯಾತ್ರೆಯಲ್ಲಿ ಭಾಗವಹಿಸುವ ನಾಯಕರ ಪಟ್ಟಿಯನ್ನು ಕಾಂಗ್ರೆಸ್ ನಿನ್ನೆ ಬಿಡುಗಡೆ ಮಾಡಿದೆ.

ಯಾತ್ರೆ ಇದೇ ಸೆಪ್ಟೆಂಬರ್ 7 ರಂದು ಆರಂಭವಾಗಲಿದ್ದು, ರಾಜಸ್ತಾನದ ಜಲವಾರ್, ಕೋಟ, ಡೌಸ ಮತ್ತು ಅಲ್ವರ್ ಜಿಲ್ಲೆಗಳ ಮೂಲಕ ಸಾಗಲಿದೆ. ರಾಜಸ್ತಾನದಿಂದ ಪ್ರಾತಿನಿಧ್ಯವನ್ನು ಶ್ರವಣ್ ಕುಮಾರ್ ಗುರ್ಜಾರ್, ಜಬರ್ ಶೆರಾವಟ್, ಸೀತಾರಾಮ್ ಲಂಬ, ಯೋಗೇಶ್ ಕುಮಾರ್ ಮೀನಾ, ರೂಬಿ ಖಾನ್, ವಿವೇಕ್ ಭಟ್ನಾಗರ್, ಜಗದೀಶ್ ಬಿಶ್ನೊಯ್ ಮತ್ತು ಶತ್ರುಘನ್ ಶರ್ಮ ವಹಿಸಲಿದ್ದಾರೆ.

ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್, ರಾಜ್ಯಾಧ್ಯಕ್ಷ ದೊತಸಾರ ಅವರು ಸಹ ಯಾತ್ರೆಯಲ್ಲಿ ರಾಹುಲ್ ಗಾಂಧಿಯವರ ಜೊತೆಯಾಗಲಿದ್ದಾರೆ.

ಕರ್ನಾಟಕದಿಂದ ಯಾತ್ರೆಯ ಬಗ್ಗೆ ವಿವರ ನೀಡಿದ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್, ರಾಜ್ಯದಿಂದ ಪಕ್ಷದ ಪ್ರತಿಯೊಬ್ಬ ಶಾಸಕರು 5 ಸಾವಿರ ಜನರನ್ನು ಸೇರಿಸುವಂತೆ ಸೂಚನೆ ನೀಡಲಾಗಿದೆ, ರಾಜ್ಯದಲ್ಲಿ 21 ದಿನಗಳ ಕಾಲ ಯಾತ್ರೆ ನಡೆಯಲಿದೆ ಎಂದರು.

ಗುರುವಾರ ಬೆಂಗಳೂರಿನಲ್ಲಿ ಈ ಕುರಿತು ನಡೆದ ಸಭೆಯಲ್ಲಿ ಜೈರಾಮ್ ರಮೇಶ್, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಹಾಗೂ ಇತರರು ಭಾಗವಹಿಸಿ ಭಾರತ್ ಜೋಡೋ ಯಾತ್ರೆ ದೇಶದ 12 ರಾಜ್ಯಗಳಲ್ಲಿ ಸೆಪ್ಟೆಂಬರ್ 7ರಂದು ಆರಂಭವಾಗಿ 3,570 ಕಿಲೋ ಮೀಟರ್ ಸಂಚರಿಸಲಿದೆ ಎಂಬ ಮಾಹಿತಿ ನೀಡಿದ್ದಾರೆ.

Edited By :
PublicNext

PublicNext

02/09/2022 02:50 pm

Cinque Terre

23.21 K

Cinque Terre

5

ಸಂಬಂಧಿತ ಸುದ್ದಿ