ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸರಕಾರ ಅತಿವೃಷ್ಟಿ ಸಂತ್ರಸ್ತರ ಪರವಾಗಿ ನಿಲ್ಲಬೇಕು: ಡಿ.ಕೆ ಶಿವಕುಮಾರ್

ರಾಮನಗರ: ನನ್ನ 40 ವರ್ಷಗಳ ಅನುಭವದಲ್ಲಿ ಇಂತಹ ಮಹಾಮಳೆಯನ್ನು ನೋಡಿರಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಅವರು ಇಂದು ರಾಮನಗರ ಭಾಗದಲ್ಲಿ ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದರು. ಕರ್ನಾಟಕದ ಕೆಲವು ಭಾಗಗಳಲ್ಲಿ ನದಿ ತುಂಬಿ ಹರಿದು ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದನ್ನು ನಾನು ನೋಡಿದ್ದೇನೆ. ರಾತ್ರಿಯಿಡೀ ಸುರಿದ ಮಳೆಗೆ ಇಲ್ಲಿನ ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ. ಜನರ ಬಟ್ಟೆ ಬರೆ, ಆಹಾರ ಪದಾರ್ಥಗಳು, ಸಾಮಗ್ರಿಗಳು ನೀರುಪಾಲಾಗಿವೆ. ಮನೆಗಳಲ್ಲಿ ಸುಮಾರು ಎರಡು ಅಡಿಗಳಷ್ಟು ಕೆಸರು ತುಂಬಿಕೊಂಡಿದ್ದು, ಜನರ ಆರೋಗ್ಯದ ಮೇಲೆ ತೀವ್ರವಾದ ಪರಿಣಾಮ ಬೀರುವ ಆತಂಕ ಕಾಡುತ್ತಿದೆ. ಈ ವಿಚಾರವಾಗಿ ನಾನು ಅಧಿಕಾರಿಗಳ ಜೊತೆ ಮಾತನಾಡಿದ್ದು ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸುವಂತೆ ಸೂಚಿಸಿದ್ದೇನೆ.

ಈ ಸಂತ್ರಸ್ತರಿಗೆ ಸರ್ಕಾರ ಕೂಡಲೇ ಪರಿಹಾರಗಳನ್ನು ನೀಡಬೇಕು. 50,000ದಿಂದ 10 ,15 ಲಕ್ಷದಷ್ಟು ಹಲವು ಮನೆಗಳಿಗೆ ಹಾನಿಯಾಗಿದೆ. ರೇಷ್ಮೆ ಕೈಗಾರಿಕೆ ಯಂತ್ರಗಳಿಗೂ ಸಾಕಷ್ಟು ನಷ್ಟವಾಗಿದ್ದು, 50 ಲಕ್ಷದಿಂದ 5 ಕೋಟಿವರೆಗೂ ಪ್ರತಿಯೊಬ್ಬರಿಗೂ ನಷ್ಟವಾಗಿದೆ. ಈ ಕೈಗಾರಿಕೆಗಳು ಇಡೀ ಕಾರ್ಖಾನೆ ವ್ಯವಸ್ಥೆಯನ್ನೇ ಹೊಸದಾಗಿ ಆರಂಭಿಸಬೇಕಿದೆ. ಈ ಕೂಡಲೇ ಸರ್ಕಾರ ಈ ವಿಚಾರವಾಗಿ ಸಮೀಕ್ಷೆ ನಡೆಸಬೇಕು. ಸಂತ್ರಸ್ತರಿಗೆ ಸರಿಯಾದ ರೀತಿಯಲ್ಲಿ ಪರಿಹಾರ ನೀಡಬೇಕು. ಸರ್ಕಾರ ಪ್ರತಿ ಕುಟುಂಬಕ್ಕೆ 10,000 ನೀಡುವುದಾಗಿ ತಿಳಿಸಿದೆ. ಈ ಮೊತ್ತ ಕೆಲ ದಿನ ಅಥವಾ ಒಂದು ತಿಂಗಳ ಊಟಕ್ಕೆ ಸರಿ ಹೋಗಬಹುದು. ಅವರ ಪುನರ್ವಸತಿ ಹಾಗೂ ಜೀವನ ಸರಿಪಡಿಸಿಕೊಳ್ಳಲು ಸರ್ಕಾರ ಬೆನ್ನೆಲುಬಾಗಬೇಕು ಎಂದು ಆಗ್ರಹಿಸಿದರು.

Edited By : Nagesh Gaonkar
PublicNext

PublicNext

31/08/2022 06:54 pm

Cinque Terre

51.43 K

Cinque Terre

2

ಸಂಬಂಧಿತ ಸುದ್ದಿ