ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

2-3 ದಿನದಲ್ಲಿ ಮನೀಷ್ ಸಿಸೋಡಿಯಾ ಅರೆಸ್ಟ್ : ಕೇಜ್ರಿವಾಲ್ ಭವಿಷ್ಯ

ನವದೆಹಲಿ : ದೆಹಲಿಯ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರನ್ನು ಮುಂದಿನ ಎರಡು ಮೂರು ದಿನಗಳಲ್ಲಿ ಬಂಧಿಸಲಾಗುತ್ತದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.ಸಿಸೋಡಿಯಾ ನಿವಾಸದ ಮೇಲೆ ಕೇಂದ್ರೀಯ ತನಿಖಾ ದಳ (CBI) ದಾಳಿ ನಡೆಸಿದ ಕೆಲವು ದಿನಗಳ ನಂತರ ಕೇಜ್ರಿವಾಲ್ ಈ ಹೇಳಿಕೆ ನೀಡಿದ್ದಾರೆ.

'ಮುಂದಿನ 10 ದಿನಗಳಲ್ಲಿ ಮನೀಶ್ ಸಿಸೋಡಿಯಾ ಅವರನ್ನ ಬಂಧಿಸುತ್ತಾರೆ ಎಂದು ನಾವು ಕೇಳುತ್ತಿದ್ದೆವು. ಆದರೆ ಮುಂದಿನ 2-3 ದಿನಗಳಲ್ಲಿ ಅವರನ್ನ ಬಂಧಿಸುತ್ತಾರೆ ಎಂದು ನಾನು ಭಾವಿಸುತ್ತೇನೆ' ಎಂದು ಕೇಜ್ರಿವಾಲ್ ಗುಜರಾತ್ ನ ಭಾವನಗರದಲ್ಲಿ ಹೇಳಿದರು.

ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಕೇಜ್ರಿವಾಲ್ ಮತ್ತು ಸಿಸೋಡಿಯಾ ಪ್ರಸ್ತುತ ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿದ್ದಾರೆ, ಅಲ್ಲಿ ಈ ವರ್ಷದ ಕೊನೆಯಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ.

Edited By : Nirmala Aralikatti
PublicNext

PublicNext

23/08/2022 10:20 pm

Cinque Terre

117.78 K

Cinque Terre

21

ಸಂಬಂಧಿತ ಸುದ್ದಿ