ವಿಜಯಪುರ: ತಣ್ಣಗಾಗಿದ್ದ ಮಾಂಸಾಹಾರ ಹಾಗೂ ಸಸ್ಯಾಹಾರ ಸೇವನೆ ವಿವಾದ ಮತ್ತೆ ಭುಗಿಲೆದ್ದಿದೆ. ಮೊನ್ನೆಯಷ್ಟೇ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋಗಿದ್ದರು ಎಂಬ ಆರೋಪ ಕೇಳಿಬಂದಿತ್ತು. ಇದಾದ ನಂತರ ಮತ್ತೊಂದು ವಿವಾದ ಈಗ ಶುರುವಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿದ್ದರಾಮಯ್ಯ ತಾಕತ್ತಿದ್ದರೆ ಹಮದಿ ಮಾಂಸ ತಿಂದು ಮಸೀದಿಗೆ ಹೋಗಲಿ ಎಂದು ಸವಾಲೆಸೆದಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವಾಲಯಗಳಲ್ಲಿ ಧರ್ಮಪಾಲನ ಸಂಸ್ಕೃತಿ ಇದೆ. ಒಂದೊಂದು ದೇವಾಲಯಗಳಲ್ಲಿ ಒಂದೊಂದು ಪದ್ದತಿ ಇದೆ. ಕೆಲವು ಕಡೆ ಮಾಂಸ ಸೇವಿಸಿ ಹೋಗಬಹುದು. ಮತ್ತೆ ಕೆಲವು ಕಡೆಗಳಲ್ಲಿ ಮಾಂಸಾಹಾರ ಸೇವಿಸಿ ಹೋಗೋದು ನಿಷಿದ್ಧ ಎಂದರು. ಆದ್ರೆ ಸಿದ್ದರಾಮಯ್ಯನವರ ನಡೆಯಿಂದ ದೇವರನ್ನು ನಂಬುವ ಆಸ್ತಿಕರ ಮನಸ್ಸಿಗೆ ನೋವಾಗಿದೆ. ಅವರಿಗೆ ತಾಕತ್ತು ಇದ್ದರೆ ಹಂದಿ ಮಾಂಸ ತಿಂದು ಮಸೀದಿಗೆ ಹೋಗಲಿ ಎಂದು ಸವಾಲು ಹಾಕಿದ್ದಾರೆ.
PublicNext
22/08/2022 05:25 pm