ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅವ್ರು ನಾಟಿಕೋಳಿ ಸಾರು ತಿಂದೇ ಇಲ್ಲ ಎಂದ ಮಾಜಿ ಎಂಎಲ್‌ಸಿ- ಆದ್ರೆ ಸಿದ್ದು ಹೇಳಿದ್ದೇ ಬೇರೆ..

ಮಡಿಕೇರಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಟಿಕೋಳಿ ಸಾಂಬಾರ್​ ತಿಂದು ದೇವಾಲಯಕ್ಕೆ ಭೇಟಿ ಕೊಟ್ಟಿರುವ ವಿಚಾರ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಒಂದು ರೀತಿ ಪ್ರತಿಕ್ರಿಯೆ ಕೊಟ್ಟರೆ, ಸಿದ್ದರಾಮಯ್ಯ ಅವರು ನೀಡಿದ ಪ್ರತಿಕ್ರಿಯೆ ವಿಭಿನ್ನವಾಗಿವೆ.

ಹೌದು. ಮಡಿಕೇರಿಯ ಅತಿಥಿಗೃಹದಲ್ಲಿ ಕಳೆದ 18ರಂದು ಮಧ್ಯಾಹ್ನ ಊಟ ಮಾಡಿದ್ದ ಸಿದ್ದರಾಮಯ್ಯನವರು ನಂತರ ಅಲ್ಲಿಂದ ದೇವಾಲಯಕ್ಕೆ ಭೇಟಿ ನೀಡಿದ್ದರು. ಅತಿಥಿ ಗೃಹದಲ್ಲಿ ಸಿದ್ದರಾಮಯ್ಯ ಅವರಿಗೆ ಮಾಜಿ ಎಂಎಲ್‌ಸಿ ವೀಣಾ ಅಚ್ಚಯ್ಯ ಅವರು ಊಟದ ವ್ಯವಸ್ಥೆ ಮಾಡಿಸಿದ್ದರು.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮಾಜಿ ಎಂಎಲ್‌ಸಿ ವೀಣಾ ಅಚ್ಚಯ್ಯ, 'ನಾನು ಸಿದ್ದರಾಮಯ್ಯನವರಿಗಾಗಿ ನಾಟಿಕೋಳಿನ ಸಾರು ಮಾಡಿಸಿದ್ದು ನಿಜ. ಅದು ಅವರಿಗೆ ತುಂಬಾ ಪ್ರೀತಿ ಎನ್ನುವ ಕಾರಣಕ್ಕೆ ಮಾಡಿಸಿದ್ದೆ. ಆದರೆ ಅವರು ಅದರ ಸೇವನೆ ಮಾಡಲಿಲ್ಲ, ತರಕಾರಿ ಸಾಂಬಾರು ಸೇವಿಸಿ ಹೋಗಿದ್ದರು' ಎಂದು ಹೇಳಿದ್ದಾರೆ.

ಆದರೆ ಈ ಬಗ್ಗೆ ಖುದ್ದು ಸಿದ್ದರಾಮಯ್ಯನವರು ಹೇಳುತ್ತಿರುವುದೇ ಬೇರೆ. ಮಾಧ್ಯಮ ಪ್ರತಿನಿಧಿಗಳು ಚಿಕ್ಕಬಳ್ಳಾಪುರದಲ್ಲಿ ಈ ಪ್ರಶ್ನೆ ಕೇಳುತ್ತಲೇ ಗರಂ ಆದ ಸಿದ್ದರಾಮಯ್ಯ, "ಏನಿಗ? ದೇವರು ಇಂಥದ್ದೇ ತಿನ್ನಬೇಕು ಅಂತ ಏನಾದ್ರೂ ಹೇಳಿದ್ದಾನಾ ಹೇಳ್ರಪ್ಪ" ಎಂದು ಪ್ರಶ್ನಿಸಿದರು.

ನೀವು ರಾತ್ರಿ ಮಾಂಸ ತಿಂದು ಬೆಳಗ್ಗೆ ಹೋಗ್ಬೋದಂತೆ, ಮಧ್ಯಾಹ್ನ ತಿಂದು ಸಂಜೆ ಹೋದ್ರೆ ತಪ್ಪೇನಯ್ಯಾ? ದೇವರು ಇದನ್ನು ತಿನ್ನು, ಇದನ್ನು ತಿನ್ಬೇಡ ಅಂತ ಏನಾದ್ರೂ ಹೇಳಿದ್ದಾನಾ? ಆ ಬಿಜೆಪಿಯವರಿಗೆ ಸುಮ್ಮನೇ ಮೊಸರಿನಲ್ಲಿ ಕಲ್ಲು ಹುಡುಕೋ ಕೆಲಸ. ಎಲ್ಲಿ ಚೆನ್ನಾಗಿದ್ಯೋ ಅಲ್ಲಿ ಬೆಂಕಿ ಹಾಕೋದು, ವಿಷ ಹಾಕೋದು ಕೆಲ್ಸ. ಈಗ ಇದನ್ನೇ ದೊಡ್ಡ ವಿವಾದ ಮಾಡ್ತಿದ್ದಾರೆ ಎಂದು ಕಿಡಿ ಕಾರಿದರು.

Edited By : Vijay Kumar
PublicNext

PublicNext

22/08/2022 01:39 pm

Cinque Terre

22.97 K

Cinque Terre

2

ಸಂಬಂಧಿತ ಸುದ್ದಿ