ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಮನೆಗೆ ವೀರ ಸಾವರ್ಕರ್ ಹೆಸರು, ನಿತ್ಯ ಪೂಜೆ-ನಮನ ; "ನಾನು ಸಾವರ್ಕರ್‌ ಅಭಿಯಾನ"

ಗದಗ: ವೀರ ಸಾವರ್ಕರ್ ವರ್ಸಸ್ ಟಿಪ್ಪು ವಿವಾದ ರಾಜ್ಯಾದ್ಯಂತ ಭುಗಿಲೆದ್ದಿದೆ. ಈ ರಾಜಕೀಯ ಕೆಸರೆರಚಾಟದಲ್ಲಿ ಸಾವರ್ಕರ್ ಹೆಸರನ್ನು ವಿವಾದವನ್ನಾಗಿ ಮಾಡುತ್ತಿದ್ರೆ, ಮುದ್ರಣ ಕಾಶಿ ಗದಗ್‌ ನಲ್ಲಿ ಸಾವರ್ಕರ್ ವಿರಾಜಮಾನವಾಗ್ತಿದ್ದಾರೆ.

ಹೌದು... ಗದಗ ನಗರದ ಒಕ್ಕಲಗೇರಿಯ ವಿಶ್ವನಾಥ ರೋಖಡೆ, ಮಹೇಶ ರೋಖಡೆ ತಮ್ಮ ಮನೆಗೆ "ವೀರ ಸಾವರ್ಕರ್ ನಿಲಯ" ಎಂಬ ಹೆಸರಿಟ್ಟಿದ್ದಾರೆ. ಅಲ್ಲದೆ, ಮನೆ ದೇವರ ಕೋಣೆಯಲ್ಲೂ ಸಾವರ್ಕರ್ ಭಾವಚಿತ್ರವಿಟ್ಟು ನಿತ್ಯ ಪೂಜೆ ಸಲ್ಲಿಸ್ತಾರೆ. ಸ್ವಾತಂತ್ರ್ಯಕ್ಕಾಗಿ, ಹಿಂದುತ್ವ ಒಗ್ಗೂಡಿಸಲು ಹಾಗೂ ದೇಶಕ್ಕಾಗಿ ಭಯಾನಕ ಕಾಲಾಪಾನಿ ಸೆರೆಮನೆ ಶಿಕ್ಷೆ ಅನುಭವಿಸಿದ್ದಾರೆ. ಅವರ ತತ್ವ- ಸಿದ್ದಾಂತ ಎಂದಿಗೂ ಮಾದರಿ ಎಂದು ಕುಟುಂಬಸ್ಥರೆಲ್ಲರೂ ಸಾವರ್ಕರ್ ಆರಾಧನೆ ಮಾಡ್ತಿದ್ದಾರೆ.

ಇವರ ಸಾವರ್ಕರ್ ಆರಾಧನೆ ಇಂದು ನಿನ್ನೆಯದ್ದಲ್ಲ. ಹಲವಾರು ವರ್ಷಗಳಿಂದಲೂ ಪೂಜ್ಯ ಭಾವನೆಯಿಂದ ದೇವ ಮಾನವರಂತೆ ಕಾಣ್ತಿದ್ದಾರೆ. ಮತ್ತೊಂದು ವಿಶೇಷ ಅಂದ್ರೆ, ನಗರದಲ್ಲಿ ಶ್ರೀರಾಮಸೇನೆ, ಆಟೋ ಸೇನಾ ಸಂಘದಿಂದ 98 ಆಟೋಗಳಲ್ಲಿ ಸಾವರ್ಕರ್ ಭಾವಚಿತ್ರ ಅಂಟಿಸಿದ್ದಾರೆ. ಸ್ವಯಂ ಪ್ರೇರಣೆಯಿಂದ ಚಾಲಕರು ತಮ್ಮ ತಮ್ಮ ಆಟೋಗಳಿಗೆ ಸಾವರ್ಕರ್ ಭಾವಚಿತ್ರ ಹಾಕಿಕೊಂಡಿದ್ದಾರೆ.

Edited By : Shivu K
PublicNext

PublicNext

19/08/2022 10:03 pm

Cinque Terre

65.09 K

Cinque Terre

10

ಸಂಬಂಧಿತ ಸುದ್ದಿ