ಅಥಣಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಭಾಷಣದ ವೇಳೆ ಮತ್ತೆ ಯಡವಟ್ಟು ಮಾಡಿಕೊಂಡ ಕಾಗವಾಡ ಶಾಸಕ ಶ್ರೀಮಂತ ಪಾಟೀಲ, 1947 ರ ಬದಲಿಗೆ 1940 ರಲ್ಲಿ ನಮಗೆ ಸ್ವಾಂತಂತ್ರ್ಯ ದೊರೆತಿದೆ ಎಂದು ಹೇಳಿ ಹೊಸ ಯಡವಟ್ಟು ಮಾಡಿಕೊಂಡಿದ್ದಾರೆ.
ಕಾಗವಾಡ ಪಟ್ಟಣದ ಶಿವಾನಂದ ಮಹಾವಿದ್ಯಾಲಯದಲ್ಲಿ ಜರುಗಿದ ಸ್ವಾತಂತ್ರ್ಯೋತ್ಸವ ಆಚರಣೆ ವೇಳೆ ಭಾಷಣ ಮಾಡಿದ ಶಾಸಕ ಶ್ರೀಮಂತ ಪಾಟೀಲ ಅವರು ಮಾತಿನ ಭರದಲ್ಲಿ ನಮ್ಮ ದೇಶಕ್ಕೆ 1940 ರಲ್ಲಿ ಸ್ವಾತಂತ್ರ್ಯ ಸಿಕ್ಕಿದೆ ಎಂದು ಹೇಳಿ ನೆರೆದ ಜನರನ್ನು ಆಶ್ಚರ್ಯ ಚಕಿತಗೊಳಿಸಿದ್ದಾರೆ.
ಪದೇ ಪದೇ ಮಾತಿನಲ್ಲಿ ಯಡವಟ್ಟು ಮಾಡಿಕೊಳ್ಳುತ್ತಿರುವ ಇವರು ಕಳೆದ ದಿನಗಳ ಹಿಂದೆ ಡಿಸೆಂಬರ್ 35 ಕಾಮಗಾರಿ ಉದ್ಘಾಟನೆ ಮಾಡಲಾಗುವುದೆಂದು ನಗೆಪಾಟಲಿಗೆ ಒಳಗಾಗಿದ್ದ ಇವರ ಲಿಸ್ಟಿಗೆ ಇದೀಗ ಹೊಸದೊಂದು ಯಡವಟ್ಟು ಸೇರ್ಪಡೆಯಾಗಿದೆ ಎಂದು ಜನ ಮಾತಾನಾಡಿಕೊಳ್ಳುತ್ತಿದ್ದಾರೆ.
PublicNext
15/08/2022 11:09 pm