ಅಥಣಿ : ಮಲ್ಲಿಕಾರ್ಜುನ ಖರ್ಗೆ ಅವರು ಶಾಸಕ ಪ್ರಿಯಾಂಕ್ ಖರ್ಗೆಗೆ ಕರೆದು ಬುದ್ದಿವಾದ ಹೇಳುವಂತೆ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಲಹೆ ನೀಡಿದ್ದಾರೆ. ಇತ್ತಿಚೆಗೆ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ಸರ್ಕಾರ ಲಂಚ ಮಂಚ ಸರ್ಕಾರ ಎಂದು ಆರೋಪಕ್ಕೆ ಸವದಿ ಅಥಣಿಯಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರ ತಂದೆ, 50 ವರ್ಷ ರಾಜಕಾರಣ ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಪ್ರಿಯಾಂಕ್ ಖರ್ಗೆಗೆ ಬುದ್ಧಿವಾದ ಹೇಳಲಿ, ಯಾವತ್ತೂ ಮಲ್ಲಿಕಾರ್ಜುನ ಖರ್ಗೆ ಹಿಂತಹ ಹೊಲಸು ಟೀಕೆ ಮಾಡಿಲ್ಲ, ಪ್ರಿಯಾಂಕ ಖರ್ಗೆ ಅವರಿಗೆ ಬುದ್ಧಿವಾದ ಹೇಳುವುದು ಅಗತ್ಯವಿದೆ. ಈ ರೀತಿ ಹೆಣ್ಣು ಮಕ್ಕಳನ್ನು ಗುರಿಯಾಗಿ ಮಾತನಾಡುವುದು ಸರಿಯಿಲ್ಲ ಎಂದ ಸವದಿ ಸಲಹೆ ನೀಡಿದರು.
ಸರ್ಕಾರ ನಡೆಯುತ್ತಿಲ್ಲ ಮ್ಯಾನೇಜ್ ಮಾಡುತ್ತಿದ್ದೇವೆ, ಸಚಿವ ಮಾಧುಸ್ವಾಮಿ ಹೇಳಿಕೆ ವಿಚಾರ ಕುರಿತು ಮಾತನಾಡಿ, ಸರ್ಕಾರ ಬಂದು ಮೂರು ವರ್ಷ ಕಳೆದಿದೆ, ಒಂದು ವರ್ಷ ಪ್ರವಾಹ, ಎರಡು ವರ್ಷ ಕೊರೊನಾದಿಂದ ಸರ್ಕಾರಕ್ಕೆ ಆರ್ಥಿಕವಾಗಿ ತುಂಬಾ ಕಷ್ಟವಾಗಿದೆ. ಸಚಿವ ಮಧುಸ್ವಾಮಿ ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂಬುವುದು ಗೊತ್ತಿಲ್ಲ, ಮಾಧುಸ್ವಾಮಿ ಕಾನೂನು ಸಚಿವರಿದ್ದಾರೆ, ರಾಜಕೀಯ ಸಾಕಷ್ಟು ಅನುಭವವಿದೆ, ಯಾವುದೇ ಒಂದು ತರ್ಕವಿಲ್ಲದೆ ಮಾತನಾಡುವುದಿಲ್ಲ, ಮಾಧುಸ್ವಾಮಿ ಸಮಯ ಸಂದರ್ಭ ನೋಡಿ ಮಾತನಾಡಿರುತ್ತಾರೆಂದು ಸವದಿ ಸಮರ್ಥನೆ ಮಾಡಿಕೊಂಡರು.
ಸಿಎಂ ಬದಲಾವಣೆ ವಿಚಾರ ಯಾರೂ ಹೇಳಿಲ್ಲ, ಅದಕ್ಕೆ ರೆಕ್ಕೆಪುಕ್ಕ ಕಟ್ಟಿ ಕಾಗೆ ಹಾರಿಸುವ ಕೆಲಸ ನೀವೆ ಮಾಡ್ತಿರಿ, ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ತಿಳಿಸಿದರು.
ವರದಿ : ಸಂತೋಷ ಬಡಕಂಬಿ.
PublicNext
15/08/2022 07:12 pm